ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ವತಿಯಿಂದ ಕಾರ್ಯಕರ್ತರ ಸಮಾವೇಶ

ಬುರೈದ : ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ಬ್ಲಾಕ್ ಸಮಿತಿಯ ವತಿಯಿಂದ ಕಾರ್ಯಕರ್ತರ ಸಮಾವೇಶ ಮತ್ತು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವು ಪಾಂಡಾ ಇಸ್ತಿರಾದಲ್ಲಿ ಅಬ್ಬಾಸ್ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ನಡೆಯಿತು.
ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ಬ್ಲಾಕ್ ಸಮಿತಿಯ ಸದಸ್ಯರಾದ ಅಯಾಝ್ ಕಾಟಿಪಳ್ಳ ಸೌದಿ ಅರೇಬಿಯಾದಲ್ಲಿ ಸೋಶಿಯಲ್ ಫೋರಮ್ ಇದರ ಕಾರ್ಯವೈಖರಿ ಹಾಗೂ ಪಕ್ಷದ ತತ್ವ ಸಿದ್ಧಾಂತವನ್ನು ವಿವರಿಸಿದರು. ಹೊಸ ಸದಸ್ಯರನ್ನು ಪಕ್ಷದ ಶಾಲು ಹೊದಿಸಿ ಬರ ಮಾಡಿಕೊಳ್ಳಲಾಯಿತು.
ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ಬ್ಲಾಕ್ ಇದರ ನೂತನ ಅಧ್ಯಕ್ಷರಾದ ರಶೀದ್ ಉಚ್ಚಿಲ ಪ್ರಸಕ್ತ ಭಾರತದ ಪರಿಸ್ಥಿತಿ ಹಾಗೂ ತಮ್ಮ ಪಕ್ಷದ ಅಗತ್ಯತೆಯ ಬಗ್ಗೆ ಕಾರ್ಯಕರ್ತರಿಗೆ ವಿವರಿಸಿದರು. ಸಭಾಧ್ಯಕ್ಷರಾದ ಅಬ್ಬಾಸ್ ಕುಕ್ಕುವಳ್ಳಿ ಮಾತನಾಡುತ್ತಾ ಇಂಡಿಯನ್ ಸೋಶಿಯಲ್ ಫೋರಮ್ ತನ್ನ ಪಕ್ಷದ ಉನ್ನತಿಗಾಗಿ ಎಲ್ಲಾ ಕಾರ್ಯಕರ್ತರು ಉತ್ತಮ ರೀತಿಯಲ್ಲಿ ಸಮಾಜ ಸೇವೆ ಮಾಡುವುದರೊಂದಿಗೆ ಇನ್ನಷ್ಟು ಎತ್ತರಕ್ಕೆ ಬೆಳೆಸಬಹುದೆಂದು ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಸಯೀದ್ ಪುಂಜಾಲಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಯೂಬ್ ಉಪ್ಪಿನಂಗಡಿ ನಿರೂಪಿಸಿದರೆ, ಜಮಾಲ್ ಅಡ್ಡೂರು ವಂದಿಸಿದರು.











