ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿಯ ಇನ್ನೋರ್ವ ಆರೋಪಿಗೆ ಜಾಮೀನು

ಹೊಸದಿಲ್ಲಿ, ಡಿ. 5: ಟಿಆರ್‌ಪಿ ತಿರುಚುವಿಕೆ ಹಗರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ಬಂಧಿತರಾಗಿದ್ದ ರಿಪಬ್ಲಿಕ್ ಟಿವಿಯ ಪಶ್ಚಿಮ ವಲಯದ ವಿತರಣಾ ಮುಖ್ಯಸ್ಥ ಘನಶ್ಯಾಮ್ ಸಿಂಗ್‌ಗೆ ಇಲ್ಲಿನ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ.
ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಉಪಾಧ್ಯಕ್ಷರಾಗಿರುವ ಸಿಂಗ್ ಅವರನ್ನು ನವೆಂಬರ್ 10ರಂದು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಹನ್ಸಾ ಸಂಶೋಧನಾ ಸಂಸ್ಥೆಯ ಮಾಜಿ ಉದ್ಯೋಗಿ ವಿಶಾಲ್ ಭಂಡಾರಿ ಅವರಿಗೆ ಸೆಷನ್ಸ್ ನ್ಯಾಯಾಲಯ ಅಕ್ಟೋಬರ್ 8ರಂದು ಜಾಮೀನು ನೀಡಿತ್ತು. ಘನಶ್ಯಾಮ್ ಸಿಂಗ್ ಅವರ ಜಾಮೀನು ಆದೇಶವನ್ನು ನ್ಯಾಯಮೂರ್ತಿ ಡಿ.ಎಸ್. ದೇಶ್‌ಮುಖ್ ನೀಡಿದರು.
Next Story





