ಎರಡನೇ ಟ್ವೆಂಟಿ-20: ಭಾರತಕ್ಕೆ ಕಠಿಣ ಸವಾಲು
ವೇಡ್ ಅರ್ಧಶತಕ, ಆಸ್ಟ್ರೇಲಿಯ 194/5

ಸಿಡ್ನಿ: ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು ಭಾರತದ ಗೆಲುವಿಗೆ 195 ರನ್ ಕಠಿಣ ಗುರಿ ನೀಡಿದೆ.
ರವಿವಾರ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು.
ಆರಂಭಿಕ ಆಟಗಾರ ಹಾಗೂ ನಾಯಕ ಮ್ಯಾಥ್ಯೂ ವೇಡ್(58, 32 ಎಸೆತ, 10 ಬೌಂಡರಿ, 1 ಸಿಕ್ಸರ್), ಸ್ಟೀವನ್ ಸ್ಮಿತ್ (46, 38 ಎಸೆತ, 3 ಬೌಂಡರಿ, 2 ಸಿಕ್ಸರ್), ಹೆನ್ರಿಕ್ಸ್ (26), ಮ್ಯಾಕ್ಸ್‌ವೆಲ್(22)ತಂಡದ ಸ್ಕೋರನ್ನು ಹಿಗ್ಗಿಸಿದರು.
ಭಾರತದ ಪರ ನಟರಾಜನ್ 20 ರನ್‌ಗೆ 2 ವಿಕೆಟ್ ಪಡೆದರು.
Next Story





