ಅಬಕಾರಿ ಅಕ್ರಮ ತಡೆಗೆ ವಿಚಕ್ಷಣದಳ ರಚನೆ
ಮಂಗಳೂರು, ಡಿ.5: ಗ್ರಾಮ ಪಂಚಾಯತ್‌ಗಳ ಸಾರ್ವತ್ರಿಕ ಚುನಾವಣೆಯ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನಡೆಯ ಬಹುದಾದ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯಿಂದ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ವಿಚಕ್ಷಣ ದಳಗಳನ್ನು ರಚಿಸಲಾಗಿದೆ.
ವಿಚಕ್ಷಣ ದಳಗಳ ನಿಯಂತ್ರಣಾಧಿಕಾರಿ ಹುದ್ದೆ, ಹೆಸರು ಹಾಗೂ ದೂ.ಸಂ.: ಜಿಲ್ಲಾ ಮಟ್ಟ - ಶೈಲಜಾ ಎ. ಕೋಟೆ, ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ (9449597103). ಉಪ ವಿಭಾಗ ಮಟ್ಟ - ಶಿವಪ್ರಸಾದ್, ಅಬಕಾರಿ ಉಪ ಅಧೀಕ್ಷಕರು, ಮಂಗಳೂರು ಉಪ ವಿಭಾಗ (9449597109), ಅಮರನಾಥ ಎಸ್.ಎಸ್. ಭಂಡಾರಿ, ಅಬಕಾರಿ ಉಪ ಅಧೀಕ್ಷಕರು, ಮಂಗಳೂರು ಉಪ ವಿಭಾಗ-2 (9449597781), ಶೋಭಾ ಕೆ., ಅಬಕಾರಿ ಉಪ ಅಧೀಕ್ಷಕರು, ಬಂಟ್ವಾಳ ಉಪ ವಿಭಾಗ (9448547076), ಶಿವಪ್ರಸಾದ್, ಅಬಕಾರಿ ಉಪ ಅಧೀಕ್ಷಕರು, ಪುತ್ತೂರು ಉಪ ವಿಭಾಗ (9449597111) ಅವರನ್ನು ಸಂಪರ್ಕಿಸಬಹುದು.
ಸಾರ್ವಜನಿಕರು ಅಬಕಾರಿ ಅಕ್ರಮಗಳ ಬಗ್ಗೆ ಮಾಹಿತಿಯನ್ನು ವಿಚಕ್ಷಣ ದಳಗಳ ನಿಯಂತ್ರಣಾಧಿಕಾರಿಗಳಿಗೆ ನೀಡಬಹುದಾಗಿದೆ ಎಂದು ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





