ಡಾ.ಸಿ.ವೀರಣ್ಣ ಅವರ ರುದ್ರ ಭಾರತ ನಾಟಕ ಕೃತಿ ಬಿಡುಗಡೆ
ಬೆಂಗಳೂರು, ಡಿ. 6: ಹಿರಿಯ ಸಾಹಿತಿ ಡಾ.ಸಿ.ವೀರಣ್ಣ ರಚಿಸಿರುವ ರುದ್ರಭಾರತ ನಾಟಕ ಕೃತಿಯಲ್ಲಿ ಮಹಾಭಾರತದ ಕುರುಕ್ಷೇತ್ರ ನಂತರದ ಪ್ರಸಂಗಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ ಎಂದು ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ತಿಳಿಸಿದ್ದಾರೆ.
ರವಿವಾರ ಬುಕ್ಸ್ ಲೋಕ ಪ್ರಕಾಶನವು ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿ ಹಮ್ಮಿಕೊಂಡಿದ್ದ ಸಿ.ವೀರಣ್ಣರವರ ರುದ್ರ ಭಾರತ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರುದ್ರ ಭಾರತ ನಾಟಕವು ಕುರುಕ್ಷೇತ್ರದ ಯುದ್ದೋತ್ತರ ಪ್ರಸಂಗಗಳನ್ನೇ ಆಧರಿಸಿ ಇಡೀ ಮಹಾಭಾರತದ ದರ್ಶನ ಆಗುವಂತೆ ಮಾಡಿದೆ ಎಂದರು.
ಹಿರಿಯ ರಂಗಭೂಮಿ ಕಲಾವಿದ ಡಾ.ಲಕ್ಷ್ಮಣ ದಾಸ್ ಅವರು ನಾಟಕ ಆಯ್ದ ಭಾಗಗಳನ್ನು ವಾಚನ ಮಾಡಿದರು. ಆರ್.ವೆಂಕಟರಾಜು ರುದ್ರಭಾರತ ನಾಟಕವನ್ನು ಪರಿಚಯಿಸಿದರು. ಈ ವೇಳೆ ಲೇಖಕ ಸಿ.ವೀರಣ್ಣ, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಸಿದ್ದಪ್ಪ, ಲೇಖಕಿ ಆರ್.ಪೂರ್ಣಿಮಾ, ಡಾ.ಉಷಾ ಮತ್ತಿತರರಿದ್ದರು.
Next Story





