ಮೊಬೈಲ್ ಕಳವು ಆರೋಪ: ಇಬ್ಬರು ಅಪ್ರಾಪ್ತ ಬಾಲಕರ ಸೆರೆ

ಬೆಂಗಳೂರು, ಡಿ. 6: ರಸ್ತೆ ಬದಿ ನಿಂತು ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರು ಅಪ್ರಾಪ್ತ ಬಾಲಕರನ್ನು ಇಲ್ಲಿನ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಅದರಲ್ಲೂ ಸರಗಳ್ಳತನ ಪ್ರಕರಣ ಹೆಚ್ಚಾಗಿವೆ. ಆರೋಪಿಗಳ ಉಪಟಳದಿಂದ ಬೇಸತ್ತು ಸುತ್ತಮುತ್ತಲಿನಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಪರಿಶೀಲನೆ ನಡೆಸಿದ ಸಂದರ್ಭ, ಬಾಲಕರು ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಬಾಲಕರು ರಾತ್ರಿ ವೇಳೆ ಸಿಗ್ನಲ್ ಬಳಿ ಮೊಬೈಲ್ ಕಸಿದು ಪರಾರಿಯಾಗುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಶನಿವಾರ ರಾತ್ರಿ ಸರಗಳ್ಳತನಕ್ಕೆ ಬಂದಿದ್ದಾರೆ ಎನ್ನಲಾಗಿದ್ದ, ಈ ಬಗ್ಗೆ ಅನುಮಾನಸ್ಪದ ವರ್ತನೆ ಕಂಡು ಸ್ಥಳೀಯರೇ ಈ ಇಬ್ಬರು ಬಾಲಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Next Story





