ಸಹಜ ಸ್ಥಿತಿಗೆ ಮರಳಿದೆ ಶಿವಮೊಗ್ಗ

ಶಿವಮೊಗ್ಗ: ಕಳೆದ ಮೂರು ದಿನಗಳಿಂದ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ನಗರ ರವಿವಾರ ಸಹಜ ಸ್ಥಿತಿಗೆ ಮರಳಿದೆ. ಬೆಳಗ್ಗೆಯಿಂದಲೇ ಜನರ ಮತ್ತು ವಾಹನಗಳ ಓಡಾಟ ಎಂದಿನಂತಿತ್ತು. ಆದರೆ, ನಿಷೇಧಾಜ್ಞೆಯಿಂದಾಗಿ ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ.
ನಗರದ ಅಮೀರ್ ಅಹ್ಮದ್ ವೃತ್ತ ಮತ್ತು ಗಾಂಧಿ ಬಜಾರ್ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಓಡಾಟಕ್ಕೆ ಈಗಲೂ ನಿರ್ಬಂಧ ಹೇರಲಾಗಿದೆ. ಈ ಭಾಗದಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು.
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಗಸ್ತು ಮುಂದುವರಿದಿದ್ದು, ಹೆಚ್ಚು ಜನ ಸೇರುವುದಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಇನ್ನುಳಿದಂತೆ, ಬಸ್, ಆಟೋಗಳ ಸಂಚಾರ ಕೂಡ ಇತ್ತು.
Next Story





