ಪಿಪಿಇ ಕಿಟ್ ಧರಿಸಿಯೇ ಮದುವೆಯಾದ ಜೋಡಿ!

ಜೈಪುರ: ರಾಜಸ್ಥಾನದ ಬರಾನ್ ಜಿಲ್ಲೆಯ ಕೆಲವಾರ ಗ್ರಾಮದಲ್ಲಿ ಜೋಡಿಯೊಂದು ಕೋವಿಡ್-19 ಕೇಂದ್ರದಲ್ಲಿ ಪಿಪಿಇ ಕಿಟ್ ಧರಿಸಿಯೇ ವಿವಾಹವಾಗಿದೆ.
ಆನ್ ಲೈನ್ ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಜೋಡಿ ಪಿಪಿಇ ಕಿಟ್ ಧರಿಸಿ ವಿವಾಹದ ಎಲ್ಲ ವಿಧಿವಿಧಾನವನ್ನು ಪೂರೈಸಿರುವುದು ಕಂಡುಬಂದಿದೆ.
ಮದುವೆಯ ದಿನದಂದೇ ವಧುವಿನ ಕೋವಿಡ್-19 ವರದಿಯು ಪಾಸಿಟಿವ್ ಆಗಿತ್ತು. ಸರಕಾರದ ಕೋವಿಡ್-19 ಶಿಷ್ಟಾಚಾರಗಳ ಪ್ರಕಾರವೇ ವಿವಾಹವನ್ನು ನೆರವೇರಿಸಲಾಯಿತು.
Next Story





