ಫ್ರೆಂಡ್ಸ್ ಮದನಿ ನಗರ (FMN) ತಂಡದ ನೂತನ ಜೆರ್ಸಿ ಲೋಕಾರ್ಪಣೆ

ಉಳ್ಳಾಲ, ಡಿ.4: ಕುತ್ತಾರು ಪದವಿನ ಮದನಿ ನಗರದ ಅಂಡರ್ ಆರ್ಮ್ ಕ್ರಿಕೆಟ್ ತಂಡ ಎಫ್.ಎಮ್.ಎನ್ ತಂಡದ ತನ್ನ ನೂತನ ಜೆರ್ಸಿಯ ಲೋಕಾರ್ಪಣೆ ಕಾರ್ಯಕ್ರಮ ಡೆಕ್ಕನ್ ಕಂಪೆನಿ ಲಿಮಿಟೆಡ್ ಮಾಲಕತ್ವದ ಕುತ್ತಾರು ಪದವಿನ ಡೆಕ್ಕನ್ ಗಾರ್ಡನ್ ನಲ್ಲಿ ನಡೆಯಿತು.
ನೌಫಲ್ ಜಿದ್ದಾ, ಮಂಗಳೂರು ಇವರು ಎಫ್.ಎಮ್.ಎನ್. ತಂಡದ ಜೆರ್ಸಿಯ ಪ್ರಧಾನ ಪ್ರಾಯೋಜಕತ್ವವನ್ನು ವಹಿಸಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಕ್ರಿಕೆಟ್ ಅಸೋಸಿಯೇಷನ್ (UCA) ಉಪಾಧ್ಯಕ್ಷ ಸಂತೋಷ್ ಚೆಂಬುಗುಡ್ಡೆ, ಪ್ರ. ಕಾರ್ಯದರ್ಶಿ ಮಹೇಶ್ ಕುತ್ತಾರ್, ಕಾರ್ಯದರ್ಶಿ ಇಮ್ತಿಯಾಝ್ ಹಾಗೂ ಇತರ ನಾಯಕರು ಭಾಗವಹಿಸಿ ಮಾತನಾಡಿದರು.
ಎಫ್.ಎಮ್.ಎನ್ ತಂಡದ ನಾಯಕ ಮುಹಮ್ಮದ್ ಹನೀಫ್ ರವರು, ತಂಡವು ಈವರೆಗೆ ನಡೆಸಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ವಿವರಿಸಿದರು. ಅರ್ಹ ವ್ಯಕ್ತಿಗಳಿಗೆ ಅಗತ್ಯ ಸಮಯದಲ್ಲಿ ಸಹಕಾರ ನೀಡಿರುವುದರ ಬಗ್ಗೆ ತಿಳಿಸಿದರು ಮತ್ತು ಅಂಡರ್ ಆರ್ಮ್ ಕ್ರಿಕೆಟ್, ಇತರ ಕ್ರೀಡಾ ವಲಯಗಳಲ್ಲಿ ತಂಡದ ಯಶಸ್ಸು ಹಾಗೂ ಸಾಧನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಹಿರಿಯರಾದ ಇಸ್ಮಾಯಿಲ್ ದಕ್ಕೆ, ಸುರೇಶ್ ಶೆಟ್ಟಿ, ಶುಕೂರ್ ಉಳ್ಳಾಲ, ಅನೀಶ್ ಕುತ್ತಾರ್, ಮುನೀರ್ ಮಲ್ಲಿ, ಶಂಸುದ್ದೀನ್ ಕುತ್ತಾರ್, ರಿಯಾಝ್ ಕುತ್ತಾರ್, ಮನ್ಸೂರ್ ಎಮ್.ಕೆ., ನಾಸಿರ್ ಇಲೆಕ್ಟ್ರಿಶಿಯನ್, ತಂಡದ ನಿರ್ವಾಹಕರಾದ ಇಮ್ತಿಯಾಝ್, ಶಿಹಬುದ್ದೀನ್, ಎಫ್.ಎಮ್.ಎನ್. ತಂಡದ ಆಟಗಾರರು, ಹಿತೈಷಿಗಳು, ಊರಿನ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಇಮ್ತಿಯಾಝ್ ಕಿನ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.
ವಿದೇಶದಲ್ಲಿರುವ ತಂಡದ ಸದಸ್ಯರಾದ ಅತ್ತಾವುಲ್ಲಾಹ್ ಸೌದಿ ಅರೇಬಿಯ, ಅಶ್ರಫ್ ಒಮಾನ್, ಸತ್ತಾರ್ ದುಬೈ, ನಿಝಾಮ್ ಸೌದಿ ಅರೇಬಿಯಾ, ಅಫ್ರಾನ್ ಸೌದಿ ಅರೇಬಿಯಾ, ಹನೀಫ್ ಬೆಂಗ್ರೆ ದುಬೈ, ತನ್ಫಾಝ್ ದುಬೈ, ಆಸಿಫ್ ಕೆ.ಕೆ ಸೌದಿ, ಸಲ್ಮಾನ್ ಸೌದಿ ಅರೇಬಿಯಾ, ಶಮೀರ್ ದುಬೈ ಸೇರಿದಂತೆ ಇತರೆ ಸದಸ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.







