ಫಾರ್ಮುಲಾ 2 ರೇಸ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತೀಯ ಜೆಹಾನ್ ದರುವಾಲ

Photo:Twitter (@DaruvalaJehan)
ಬಹರೈನ್ : ಭಾರತದ ಭರವಸೆಯ ಕಾರ್ ರೇಸರ್ ಜೆಹಾನ್ ದರುವಾಲ ರವಿವಾರ ಸಖೀರ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಜಯ ಸಾಧಿಸಿ ಫಾರ್ಮುಲಾ 2 ರೇಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಪ್ಪತ್ತೆರಡು ವರ್ಷದ ಜೆಹಾನ್ ಅವರು ರೇಯೋ ರೇಸಿಂಗ್ ಪರ ಆಡಿದ್ದರು ಹಾಗೂ ಇದು ಫಾರ್ಮುಲಾ 2 ರೇಸಿನಲ್ಲಿ ಅವರು ಸಾಧಿಸಿದ ಮೊದಲ ಜಯವಾಗಿದೆ. ಜೆಹಾನ್ ಅವರ ಜತೆಗಾರನಾಗಿ ಯುಕಿ ತ್ಸುನೊಡಾ ಇದ್ದರು. ಅವರಿಬ್ಬರ ಜೋಡಿ ಎಫ್2 ಚಾಂಪಿಯನ್ ಮಿಕ್ ಶುಮೆಚೆರ್ ಹಾಗೂ ಡೇನಿಯಲ್ ಟಿಕ್ಟಮ್ ಅವರನ್ನು ಸೋಲಿಸಿತು.
Next Story





