ಕೋವಿಡ್-19ನಿಂದಾಗಿ ನಟಿ ದಿವ್ಯಾ ಭಟ್ನಾಗರ್ ನಿಧನ

ಮುಂಬೈ: ಕೋವಿಡ್-19 ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಟಿವಿ ನಟಿ ದಿವ್ಯಾ ಭಟ್ನಾಗರ್ ಮುಂಬೈನಲ್ಲಿ ನಿಧನರಾದರು. ಅವರಿಗೆ 34 ವರ್ಷ ವಯಸ್ಸಾಗಿತ್ತು.
ಕಳೆದ ವಾರ ದಿವ್ಯಾ ಅವರನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಇಡಲಾಗಿತ್ತು. ದಿವ್ಯಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದರು.ಉತ್ತಮ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ದಿವ್ಯಾರನ್ನು ವಿವಿಧ ಆಸ್ಪತ್ರೆಗಳಿಗೂ ಸ್ಥಳಾಂತರಿಸಿದ್ದರು.
ಇಂದು ರಾತ್ರಿ 3 ಗಂಟೆಗೆ ದಿವ್ಯಾ ನಿಧನರಾದರು. ಆಕೆಯನ್ನು ಸೆವೆನ ಹಿಲ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. 2 ಗಂಟೆಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. 3 ಗಂಟೆಗೆ ಆಕೆ ನಿಧನರಾದರೆಂದು ವೈದ್ಯರು ಘೋಷಿಸಿದರು. ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ದೊಡ್ಡ ಆಘಾತ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದಿವ್ಯಾ ಅವರ ಸ್ನೇಹಿತ ಯುವರಾಜ್ ರಘುವಂಶಿ ಹೇಳಿದ್ದಾರೆ.
ನವೆಂಬರ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಕರೆ ಸ್ಕ್ರೀನ್ ಶಾಟ್‌ವೊಂದನ್ನು ಪೋಸ್ಟ್ ಮಾಡಿದ್ದ ದಿವ್ಯಾ, ಇನ್‌ಸ್ಟಾಗ್ರಾಮ್ ಫ್ಯಾಮಿಲಿಯವರು ನನ್ನ ಚೇತರಿಕೆಗಾಗಿ ಪ್ರಾರ್ಥಿಸಿ. ನಾನು ನಿಮ್ಮೆಲ್ಲರನ್ನೂ ಇಷ್ಟಪಡುವೆ ಎಂದು ಬರೆದಿದ್ದರು.





