ಕೆಎಎಸ್ ಅಧಿಕಾರಿ ಸುಧಾ ಮೇಲೆ ಮತ್ತೊಂದು ಎಫ್‍ಐಆರ್ ಗೆ ಅನುಮತಿ ಕೋರಿದ ಎಸಿಬಿ

ಬೆಂಗಳೂರು, ಡಿ.7: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪದ ಮೇಲೆ ಜೈವಿಕ ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿ ಡಾ.ಸುಧಾ ಮೇಲೆ ಮತ್ತೊಂದು ಎಫ್‍ಐಆರ್ ದಾಖಲಿಸಲು ಎಸಿಬಿ ಸರಕಾರಕ್ಕೆ ಅನುಮತಿ ಕೋರಿದೆ.
ಬಿಡಿಎ ವಿಶೇಷ ಭೂ ಸ್ವಾಧಿನಾಧಿಕಾರಿಯಾಗಿದ್ದ ವೇಳೆ ಸುಧಾ, ಅಕ್ರಮ ಆಸ್ತಿ ಗಳಿಕೆ ಮಾಡಿ ಬಹುತೇಕ ಮಂದಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ. ಹೀಗಾಗಿ ಎಸಿಬಿ ದಾಳಿ ನಡೆಸಿ ಅಕ್ರಮ ಆಸ್ತಿ ಸಂಬಂಧ ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ಜಪ್ತಿ ಮಾಡಿದ ದಾಖಲಾತಿಗಳ ಪರಿಶೀಲನೆ ಮಾಡಿದಾಗ ಅಕ್ರಮವಾಗಿ ಆಸ್ತಿ ಗಳಿಕೆಗೆ ಮತ್ತೊಂದು ಎಫ್‍ಐಆರ್ ದಾಖಲಿಸುವುದು ಅನಿವಾರ್ಯವಾಗಿದೆ. ಇದರಿಂದ ಮತ್ತೊಂದು ಎಫ್‍ಐಆರ್ ದಾಖಲಿಸಲು ಎಸಿಬಿ ಸರಕಾರಕ್ಕೆ ಅನುಮತಿ ಕೋರಿದೆ ಎಂದು ಹೇಳಲಾಗುತ್ತಿದೆ.
Next Story





