ಪಿಕ್‌ಅಪ್ ವಾಹನ ಢಿಕ್ಕಿ: ಮಗು ಮೃತ್ಯು
ಅಮಾಸೆಬೈಲು, ಡಿ.7: ಪಿಕ್‌ಅಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಮಗುವೊಂದು ಮೃತಪಟ್ಟ ಘಟನೆ ಡಿ.7ರಂದು ಹೊಸಂಗಡಿ ಗ್ರಾಮದ ಕೆಪಿಸಿ ಕಾಲನಿಯ ವಾಟರ್ ಟ್ಯಾಂಕ್ ಬಳಿ ನಡೆದಿದೆ.
1 ವರ್ಷ 11 ತಿಂಗಳ ಸಮರ್ಥ ಮೃತ ದುದೈರ್ವಿ. ರಸ್ತೆಯ ಬದಿಯಲ್ಲಿ ಆಟವಾಡುತ್ತಿದ್ದ ಮಗುವಿಗೆ ಅಲ್ಲಿಯೇ ಹತ್ತಿರದಲ್ಲಿದ್ದ ಪಿಕ್‌ಅಪ್ ವಾಹನ ಹಿಂದಕ್ಕೆ ಚಲಾಯಿಸಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಗಂಭೀರ ವಾಗಿ ಗಾಯಗೊಂಡ ಮಗು ಸ್ಥಳದಲ್ಲಿಯೇ ಮೃತಪಟ್ಟಿತು. ಈ ಬಗ್ಗೆ ಅಮಾಸೆ ಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





