ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ಪ್ರಥಮ ಆಫ್ರಿಕನ್-ಅಮೆರಿಕನ್

ಲಾಯ್ಡ್ ಆಸ್ಟಿನ್ (Twitter)
ವಾಷಿಂಗ್ಟನ್: ಅಮೆರಿಕಾದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ರಕ್ಷಣಾ ಕಾರ್ಯದರ್ಶಿಯನ್ನಾಗಿ ನೇಮಿಸಲು ಲಾಯ್ಡ್ ಆಸ್ಟಿನ್ ಅವರನ್ನು ಆಯ್ಕೆ ಮಾಡಿದ್ದಾರೆ. ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಲಿರುವ ಮೊದಲ ಆಫ್ರಿಕನ್-ಅಮೆರಿಕನ್ ಆಗಲಿದ್ದಾರೆ ಲಾಯ್ಡ್. ಅಮೆರಿಕಾದ ಸೆಂಟ್ರಲ್ ಕಮಾಂಡ್ ನೇತೃತ್ವವನ್ನು ವಹಿಸಿದ ಅನುಭವವನ್ನೂ ಹೊಂದಿರುವ ಲಾಯ್ಡ್ ಆಸ್ಟಿನ್ ಅವರು ಬಾಗ್ದಾದ್ನಲ್ಲಿ 2003ರಲ್ಲಿ ಅಮೆರಿಕಾದ ಸೇನಾ ಪಡೆಗಳನ್ನು ಮುನ್ನಡೆಸಿದವರಾಗಿದ್ದಾರೆ.
ಸೇವೆಯಿಂದ ನಿವೃತ್ತರಾಗಿರುವ 67 ವರ್ಷದ ಸೇನಾ ಜನರಲ್ ಲಾಯ್ಡ್ ಆಸ್ಟಿನ್ ಅವರ ಹೊರತಾಗಿ ಮಾಜಿ ರಕ್ಷಣಾ ಅಪರ-ಕಾರ್ಯದರ್ಶಿ ಮಿಷೆಲ್ ಫ್ಲೋರ್ನಿ ಕೂಡ ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ಪೈಪೋಟಿಯಲ್ಲಿದ್ದರೂ, ಜನಾಂಗೀಯ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕೆಂಬ ಒತ್ತಡದ ಹಿನ್ನೆಲೆಯಲ್ಲಿ ಬೈಡೆನ್ ಅಂತಿಮವಾಗಿ ಲಾಯ್ಡ್ ಆಸ್ಟಿನ್ ಅವರನ್ನು ಆರಿಸಿದ್ದಾರೆ.
Next Story





