ಈ ವರ್ಷ ಗರಿಷ್ಠ ರಿಟ್ವೀಟ್ ಪಡೆದ ಟ್ವೀಟ್ ಯಾರದ್ದು ಗೊತ್ತೇ ?

ಹೊಸದಿಲ್ಲಿ: ಈ ವರ್ಷದ ಫೆಬ್ರವರಿಯಲ್ಲಿ ತಮಿಳು ನಟ ವಿಜಯ್ ಅವರು ಪೋಸ್ಟ್ ಮಾಡಿದ್ದ ತಮ್ಮ ಅಭಿಮಾನಿಗಳು ಹಿನ್ನೆಲೆಯಲ್ಲಿ ಕಾಣಿಸಿಕೊಳ್ಳುವ ತಮ್ಮ ಸೆಲ್ಫೀ 2020ರಲ್ಲಿ ಗರಿಷ್ಠ ರಿಟ್ವೀಟ್ ಪಡೆದ ಟ್ವೀಟ್ ಆಗಿದ್ದರೆ, ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ, ತಾವು ಹಾಗೂ ತಮ್ಮ ಪತ್ನಿ ಅನುಷ್ಕಾ ಶರ್ಮ, ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೊಂಡು ಮಾಡಿದ ಪೋಸ್ಟ್ ಹಾಗೂ ಟ್ವೀಟ್ ಮಾಡಿದ ಫೋಟೋ ಈ ವರ್ಷ ಗರಿಷ್ಠ ಲೈಕ್ ಪಡೆದ ಟ್ವೀಟ್ ಆಗಿದೆ ಎಂದು ಟ್ವಿಟರ್ ಬಿಡುಗಡೆಗೊಳಿಸಿದ ಮಾಹಿತಿ ತಿಳಿಸಿದೆ.
ರಾಜಕೀಯ ಕ್ಷೇತ್ರದ ಟ್ವೀಟ್‍ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ದೀಪ ಉರಿಸುತ್ತಿರುವ ಚಿತ್ರ ಗರಿಷ್ಠ ರಿಟ್ವೀಟ್ ಮಾಡಿದ ಪೋಸ್ಟ್ ಆಗಿದ್ದರೆ, ಕ್ರೀಡಾ ಕ್ಷೇತ್ರದಲ್ಲಿ ಟೀಂ ಇಂಡಿಯಾ ಮಾಜಿ ಕಪ್ತಾನ ಎಂ ಎಸ್ ಧೋನಿ, ಪ್ರಧಾನಿ ತಮಗೆ ಬರೆದ ಶ್ಲಾಘನಾ ಪತ್ರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಬರೆದ ಪತ್ರದ ಪೋಸ್ಟ್ ಗರಿಷ್ಠ ರಿಟ್ವೀಟ್ ಪಡೆದಿದೆ.
ಐಪಿಎಲ್ 2020 ಮತ್ತು 'ದಿಲ್ ಬೆಚಾರ' ಟಾಪ್ ಕ್ರೀಡಾ ಮತ್ತು ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದ ಹ್ಯಾಶ್ ಟ್ಯಾಗ್ ಆಗಿದ್ದರೆ ಈ ವರ್ಷದಲ್ಲಿ ಗರಿಷ್ಠ ಟ್ವೀಟ್ ಮಾಡಿದ ಮೀಮ್ 'ಬಿನೋದ್' ಆಗಿದೆ.
ಪ್ರಸಕ್ತ ವಿದ್ಯಮಾನಗಳ ವಿಭಾಗಗಳಲ್ಲಿ ಗರಿಷ್ಠ ಚರ್ಚೆಗೆ ಕಾರಣವಾದ ವಿಚಾರ ಕೋವಿಡ್-19 ಆಗಿದ್ದರೆ ಇದರ ನಂತರದ ಸ್ಥಾನ ನಟ ಸುಶಾಂತ್ ಸಿಂಗ್ ರಾಜಪುತ್ ಪ್ರಕರಣ ಹಾಗೂ ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿತ್ತು.
ಈ ಮೇಲಿನ ಮಾಹಿತಿಗಳನ್ನು ಕಲೆ ಹಾಕಲು ಟ್ವಿಟರ್ ಸುಮಾರು 100 ದಿನಗಳಿಗೂ ಅಧಿಕ ಅವಧಿಯಲ್ಲಿ 22 ನಗರಗಳಿಂದ ಮಾಡಲಾದ 10 ಲಕ್ಷಕ್ಕೂ ಅಧಿಕ ಟ್ವೀಟ್‍ಗಳನ್ನು ಗಣನೆಗೆ ತೆಗೆದುಕೊಂಡಿದೆ ಎಂದು ಟ್ವಿಟರ್ ಇಂಡಿಯಾ ಆಡಳಿತ ನಿರ್ದೇಶಕ ಮನೀಶ್ ಮಹೇಶ್ವರಿ ಹೇಳಿದ್ದಾರೆ.
Thank you Neyveli pic.twitter.com/cXQC8iPukl
— Vijay (@actorvijay) February 10, 2020







