ಡಿ.12: ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಮಂಗಳೂರು, ಡಿ.8: ಹೃದಯವಾಹಿನಿ ಮಂಗಳೂರು ಮತ್ತು ಎಸ್.ಕೆ. ಮುನಿಸಿಪಲ್ ಎಂಪ್ಲಾಯ್ಸಾ ಯೂನಿಯನ್ ಆಶ್ರಯದಲ್ಲಿ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಡಿ.12ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಡೋಜ ಮಹೇಶ್ ಜೋಶಿ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಅಂದು ಬೆಳಗ್ಗೆ 10ಕ್ಕೆ ಉದ್ಘಾಟನೆಗೊಳ್ಳಲಿದೆ. ಅದಕ್ಕೂ ಮೊದಲು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಬಿರುವೆರ್ ಕುಡ್ಲ ಮಂಗಳೂರು, ಗುರುಪ್ರಸಾದ್ ಎ.ಬಿ., ಗೋ.ನಾ. ಸ್ವಾಮಿ ಬೆಂಗಳೂರು, ಸುದರ್ಶನ್ ಎಚ್.ಪಿ. ತಾಯಿಮನೆ, ಎಚ್. ರಮೇಶ್ ಆಚಾರ್ಯ ಹೆಬ್ರಿ, ಲೀಲಾಧರ್ ಬೈಕಂಪಾಡಿ, ಕೆ.ಕೆ. ಮೀನಾಕ್ಷಿ ಮಂಗಳೂರು, ಡಾ. ನಾಗರಾಜು ಎಸ್. ಮಾಯಸಂದ್ರ, ಡಾ. ಎಂ.ಎಸ್. ಯದುಗಿರಿ ಗೋಪಾಲನ್, ಡಾ. ಪಿ.ವಿ. ಪತ್ತಾರ್ ಬನಹಟ್ಟಿ, ಜಯಕೀರ್ತಿ ಜೈನ್, ಡಾ. ಮುರಳಿಕುಮಾರ್ ಚಿಲಿಂಬಿ, ಡಾ. ದೇವಿಪ್ರಸಾದ್ ಕಾವತ್ತೂರು ಅವರಿಗೆ ಹೃದಯ ವಂತರು-2020 ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಸಮ್ಮೇಳನದಲ್ಲಿ ಜಾನಪದ ಡೊಳ್ಳು ಕುಣಿತ, ಜಾನಪದ ಗೀತೆ, ಕವಿಗೋಷ್ಠಿ, ಜಾನಪದ ನೃತ್ಯ, ಮಿಮಿಕ್ರಿ, ಭಾಷಾ ಬಾಂಧವ್ಯ ಗೋಷ್ಠಿ, ಶಾಸೀಯ ನೃತ್ಯ ರೂಪಕ, ಸಮೂಹಗಾನ, ಎಸ್‌ಪಿಬಿ ನಮನ ರಸಮಂಜರಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಮಂಜುನಾಥ್ ಸಾಗರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಡಾ. ಅಶೋಕ್‌ಕುಮಾರ್ ಕಾಸರಗೋಡು, ಸಲಹಾ ಸಮಿತಿಯ ನಿರ್ದೇಶಕ ವಿ.ಜಿ. ಪಾಲ್, ಎಸ್.ಕೆ. ಮುನಿಸಿಪಾಲ್ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಬಾಲರಾಜ್, ಮಾಜಿ ಅಧ್ಯಕ್ಷ ಪಿ. ಬಿ. ಶಿವರಾಜ್ ಉಪಸ್ಥಿತರಿದ್ದರು.







