ಡಿ.12: ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಆಸ್ರಣ್ಣ ಪ್ರಶಸ್ತಿ ಪ್ರದಾನ

ಮಂಗಳೂರು, ಡಿ.8: ಕದ್ರಿಯ ಆಸ್ರಣ್ಣ ಶಿಷ್ಯವೃಂದದ ವತಿಯಿಂದ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಅವರ ಸ್ಮರಣಾರ್ಥ ನೀಡಲಾಗುವ ‘ಅಸ್ರಣ್ಣ ಪ್ರಶಸ್ತಿ-2020’ಕ್ಕೆ ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಆಯ್ಕೆಯಾಗಿದ್ದಾರೆ.
ಡಿ.12ರಂದು ಸಂಜೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನ ಆಟ-ಕೂಟ ಗಳೆರಡರಲ್ಲೂ ತನ್ನ ಅಸಾಮಾನ್ಯ ಪ್ರತಿಭೆಯಿಂದ, ವಿದ್ವತ್‌ಪೂರ್ಣ ಮಾತುಗಾರಿಕೆ ಹಾಗೂ ಬಣ್ಣದ ವೇಷಗಳಿಂದ ಪ್ರಸಿದ್ಧರಾಗಿರುವ ಕಲಾವಿದರ ಪೈಕಿ ಅಗ್ರ ಪಂಕ್ತಿಯಲ್ಲಿರುವ ಶ್ರೀ ಸುಣ್ಣಂಬಳ ಇಶ್ವೇಶ್ವರ ಭಟ್ಟರು ತನ್ನ ಯಕ್ಷ ಕಲಾ ವ್ಯವಸಾಯವನ್ನು ಧರ್ಮಸ್ಥಳ ಮೇಳದ ಮೂಲಕ ಆರಂಭಿಸಿ ದರು. ಕಳೆದ 38 ವರ್ಷಗಳಿಂದ ಕಟೀಲು ಮೇಳದಲ್ಲಿ ನಿರಂತರವಾಗಿ ಕಲಾ ಸೇವೆಗೈಯುತ್ತಿರುವುದಲ್ಲದೆ ಮೇಳದ ಪ್ರಬಂಧಕರಾಗಿಯೂ ಸಮರ್ಥ ಸಂಘಟಕರೆನಿಸಿರುವರು. ಎಂದು ಕಾರ್ಯಕ್ರಮದ ಸಂಘಟಕರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಕದ್ರಿ ನವನೀತ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





