ಭಾರತ ಬಂದ್ ಬೆಂಬಲಿಸಿ ಬೈಂದೂರಿನಲ್ಲಿ ಪ್ರತಿಭಟನೆ

ಬೈಂದೂರು, ಡಿ.8: ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಬೆಂಬಲಿಸಿ ಕರ್ನಾಟಕ ಪ್ರಾಂತ ರೈತ ಮತ್ತು ಕೃಷಿಕೂಲಿಕಾರ ಸಂಘಗಳು ಮತ್ತು ಸಿಐಟಿಯು ಕಾರ್ಮಿಕ ಸಂಘಗಳ ಒಕ್ಕೂಟ ಮಂಗಳವಾರ ೈಂದೂರಿನಲ್ಲಿ ಪ್ರತಿಭಟನೆ ನಡೆಸಿತು.
ಕಾರ್ಮಿಕ ಮುಖಂಡ ವೆಂಕಟೇಶ್ ಕೋಣಿ ಮಾತನಾಡಿ, ರೈತ ವಿರೋಧಿ ಮೂರು ಕೃಷಿ ಕಾಯಿದೆಯನ್ನು ಈ ಕೂಡಲೆ ಹಿಂಪಡೆಯಬೇಕು. ಇಲ್ಲವಾದರೆ ಹೋರಾಟ ಉಗ್ರ ರೂಪ ಪಡೆಯಬೇಕಾದಿತು ಎಂದು ಕೇಂದ್ರ ಸರಕಾರವನ್ನು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ, ಕೂಲಿಕಾರ, ಕಾರ್ಮಿಕ ಮುಖಂಡರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಗಣೇಶ್ ತೊಂಡೆಮಕ್ಕಿ, ರಾಮ, ಮಾಧವ ದೇವಾಡಿಗ ಉಪ್ಪುಂದ, ರಾಮ ಕಂಭದಕೋಣೆ, ಶ್ರೀಧರ ನಾಡ, ಮೊದಲಾದವರು ಉಪಸ್ಥಿತರಿದ್ದರು.
Next Story





