ಉಡುಪಿಯಲ್ಲಿ ಗುಡುಗು ಸಹಿತ ಭಾರೀ ಮಳೆ

ಉಡುಪಿ, ಡಿ. 8: ಉಡುಪಿ ಜಿಲ್ಲೆಯ ವಿವಿಧೆಡೆ ಇಂದು ಸಂಜೆಯಿಂದ ಅನಿರೀಕ್ಷಿತವಾಗಿ ಗುಡುಗು ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಉಡುಪಿ ನಗರದಲ್ಲಿ ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆಯಾದರೆ, ಕುಂದಾಪುರ ಗ್ರಾಮಾಂತರ ಪ್ರದೇಶದಲ್ಲಿ, ಸಿದ್ಧಾಪುರ, ಬಸ್ರೂರು ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ.
ಅದೇ ರೀತಿ ಕುಂದಾಪುರ, ಗಂಗೊಳ್ಳಿ, ಬೈಂದೂರುಗಳಲ್ಲಿ ಕೇವಲ ಕಡೆಗಳಲ್ಲಿ ಗುಡುಗು ಮಿಂಚು ಕಂಡುಬಂದಿದೆ. ಹೆಬ್ರಿಯಲ್ಲಿ ಹನಿ ಮಳೆಯಾಗಿ ರುವ ಬಗ್ಗೆ ವರದಿಯಾಗಿದೆ.








