ಉಡುಪಿ ಗ್ರಾಪಂ ಚುನಾವಣೆ: ಎರಡನೇ ದಿನ 137 ನಾಮಪತ್ರ ಸಲ್ಲಿಕೆ
ಉಡುಪಿ, ಡಿ.8: ಡಿ.22ರಂದು ನಡೆಯುವ ಗ್ರಾಪಂ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಇಂದು ಒಟ್ಟು 137 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಿಂದ ಎರಡು ದಿನಗಳಲ್ಲಿ ಒಟ್ಟು 294 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ತಾಲೂಕಿನ 16 ಗ್ರಾಪಂಗಳ 329 ಸ್ಥಾನಗಳಿಗೆ ಇಂದು 38 (20ಪುರುಷರು+18 ಮಹಿಳೆಯರು), ಹೆಬ್ರಿ ತಾಲೂಕಿನ 9 ಗ್ರಾಪಂಗಳ 122 ಸ್ಥಾನಗಳಿಗೆ 13 (10+3), ಬೈಂದೂರು ತಾಲೂಕಿನ 15 ಗ್ರಾಪಂಗಳ 259 ಸ್ಥಾನಗಳಿಗೆ 25 (13+12) ಹಾಗೂ ಬ್ರಹ್ಮಾವರ ತಾಲೂಕಿನ 27 ಗ್ರಾಪಂಗಳ 412 ಸ್ಥಾನಗಳಿಗೆ 61 (29+32) ನಾಮಪತ್ರಗಳು ಸಲ್ಲಿಕೆಯಾಗಿವೆ.
ಈ ಮೂಲಕ ಒಟ್ಟು ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಒಟ್ಟು 67 ಗ್ರಾಪಂಗಳ 1122 ಸ್ಥಾನಗಳಿಗೆ ಇಂದು 137 ನಾಮಪತ್ರಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 72 ಮಂದಿ ಪುರುಷರು ಹಾಗೂ 65 ಮಂದಿ ಮಹಿಳೆಯರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮೊದಲ ದಿನದಂದು ಪರಿಶಿಷ್ಟ ಜಾತಿಗೆ ಸೇರಿದ 8 ಮಂದಿ (0ಪುರುಷ+8 ಮಹಿಳೆ), ಪರಿಶಿಷ್ಟ ಪಂಗಡಕ್ಕೆ ಸೇರಿದ 11(2+9), ಹಿಂದುಳಿದ ವರ್ಗ ‘ಎ’ಗೆ ಸೇರಿದ 30 (15+15), ಹಿಂದುಳಿದ ವರ್ಗ ‘ಬಿ’ಗೆ ಸೇರಿದ 1 (1+0) ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ 87 (54+33) ಮಂದಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.







