ಸರ್ಜನ್ ಜನರಲ್ ಆಗಿ ವಿವೇಕ್ ಮೂರ್ತಿಯನ್ನು ನೇಮಿಸಿದ ಬೈಡನ್

ಡಾ. ವಿವೇಕ್ ಮೂರ್ತಿ
ವಾಶಿಂಗ್ಟನ್, ಡಿ. 8: ಅವೆುರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಸೋಮವಾರ ತನ್ನ ಆರೋಗ್ಯ ತಂಡವನ್ನು ಘೋಷಿಸಿದ್ದಾರೆ. ಅವರು ಆರೋಗ್ಯ ಮತ್ತು ಮಾನವೀಯ ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ ಜೇವಿಯರ್ ಬೆಸೆರಾ ಅವರನ್ನು ನೇಮಿಸಿದರೆ, ದೇಶದ ಸರ್ಜನ್ ಜನರಲ್ ಆಗಿ ಭಾರತೀಯ-ಅಮೆರಿಕನ್ ಡಾ. ವಿವೇಕ್ ಮೂರ್ತಿಯನ್ನು ನೇಮಿಸಿದ್ದಾರೆ.
ಶ್ವೇತಭವನದ ಕೊರೋನ ವೈರಸ್ ಕಾರ್ಯಪಡೆಯ ಪ್ರಮುಖ ಸದಸ್ಯರಾಗಿರುವ ಡಾ. ಆ್ಯಂಟನಿ ಫೌಚಿಯನ್ನು ಕೋವಿಡ್-19ಕ್ಕೆ ಸಂಬಂಧಿಸಿದ ಅಧ್ಯಕ್ಷರ ಮುಖ್ಯ ವೈದ್ಯಕೀಯ ಸಲಹೆಗಾರನಾಗಿ ನೇಮಿಸಲಾಗಿದೆ.
‘‘ವಿಶ್ವಾಸಾರ್ಹ ಮತ್ತು ಪಾರಂಗತ ನಾಯಕರ ತಂಡವು, ಕೊರೋನ ವೈರಸನ್ನು ನಿಯಂತ್ರಣಕ್ಕೆ ತರುವ ಕಠಿಣ ಸವಾಲಿಗೆ ಅತ್ಯುನ್ನತ ಮಟ್ಟದ ವಿಶ್ವಾಸಾರ್ಹತೆ, ವೈಜ್ಞಾನಿಕ ಮನೋಭಾವ ಮತ್ತು ಬಿಕ್ಕಟ್ಟು ನಿರ್ವಹಣಾ ಅನುಭವವನ್ನು ತರಲಿದೆ. ಇದರೊಂದಿಗೆ ಅಮೆರಿಕದ ಜನರು ತಮ್ಮ ಕೆಲಸಕ್ಕೆ, ತಮ್ಮ ಬದುಕಿಗೆ ಮತ್ತು ತಮ್ಮ ಪ್ರೀತಿಪಾತ್ರ ಬಳಿ ಮರಳಿ ಹೋಗಬಹುದಾಗಿದೆ’’ ಎಂದು ಬೈಡನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
Next Story





