ಟಿಕರಿ ಗಡಿಯಲ್ಲಿ 32 ವರ್ಷದ ರೈತನ ಮೃತದೇಹ ಪತ್ತೆ

ಹೊಸದಿಲ್ಲಿ, ಡಿ. 8: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಮಂಗಳವಾರ ಪ್ರತಿಭಟನೆ ನಡೆಸುತ್ತಿರುವ ನಡುವ ಟಿಕರಿ ಗಡಿಯಲ್ಲಿ ಹರ್ಯಾಣದ ಸೋನಿಪತ್‌ನ 32 ವರ್ಷದ ರೈತರೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತಪಟ್ಟ ರೈತನನ್ನು ಸೋನಿಪತ್‌ನ ಗೊಹಾನ ಪ್ರದೇಶದ ಅಜಯ್ ಮೂರ್ ಎಂದು ಗುರುತಿಸಲಾಗಿದೆ. ಅಜಯ್ ಮೂರ್ ಮೃತಪಟ್ಟ ಬಗ್ಗೆ ಅವರ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘‘ಅಜಯ್ ಮೂರ್ ಪಾರ್ಕ್‌ನಲ್ಲಿ ನಿದ್ರಿಸುತ್ತಿದ್ದರು. ಇಂದು ಬೆಳಗ್ಗೆ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Next Story





