ತಾಯಿ ಜೊತೆ ಅನೈತಿಕ ಸಂಬಂಧ ಆರೋಪ: ವ್ಯಕ್ತಿಯನ್ನು ಕೊಲೆಗೈದ ಯುವಕ

ಮಂಡ್ಯ, ಡಿ.8: ತನ್ನ ತಾಯಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಮಗ ಮತ್ತು ಆತನ ಸ್ನೇಹಿತ ಕೊಲೆಗೈದಿರುವ ಘಟನೆ ಕೆ.ಆರ್.ಎಸ್. ಪೊಲೀಸ್ ಠಾಣೆ ವ್ಯಾಪ್ತಿಯ ಮೊಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಗರಾಜು(28) ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿಗಳಾದ ಮಹಿಳೆಯ ಪುತ್ರ ಸತೀಶ ಹಾಗೂ ಆತನ ಸ್ನೇಹಿತ ರಂಜಿತ್ ಪರಾರಿಯಾಗಿದ್ದು, ಅವರ ಬಂಧನಕ್ಕೆ ಕೆ.ಆರ್.ಎಸ್.ಠಾಣೆ ಪೊಲೀಸರು ಕ್ರಮವಹಿಸಿದ್ದಾರೆ.
ಕೊಲೆಯಾದ ವ್ಯಕ್ತಿ ನಾಗರಾಜು ಮೂಲತಃ ಮೈಸೂರಿನವನಾಗಿದ್ದು, ಹೆಂಡತಿ ತೊರೆದು ಮೊಗರಳ್ಳಿ ಮಂಟಿ ಗ್ರಾಮದಲ್ಲಿ ಮನೆಯೊಂದರಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದ. ಇದೇ ಗ್ರಾಮದ ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಸೋಮವಾರ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ನಾಗರಾಜು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದು, ಇದನ್ನು ತಾಯಿಯಿಂದ ತಿಳಿದ ಮಗ ಸತೀಶ ಮತ್ತು ಆತನ ಸ್ನೇಹಿತ ರಂಜಿತ್ ಕಲ್ಲಿನಿಂದ ಹೊಡೆದು ನಾಗರಾಜುವನ್ನು ಕೊಲೆಗೈದು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
Next Story





