ಮಾಸ್ಕ್ ತಯಾರಿಕಾ ಮೆಷಿನ್ ಹೆಸರಲ್ಲಿ 74 ಲಕ್ಷ ರೂ. ಟೋಪಿ ಹಾಕಿದ!
ಥಾಣೆ, ಡಿ.9: ಮಾಸ್ಕ್ ತಯಾರಿಸುವ ಮೆಷಿನ್ ಪೂರೈಸುವುದಾಗಿ ಕೇರಳ ವ್ಯಕ್ತಿಯೊಬ್ಬರನ್ನು ನಂಬಿಸಿದ ಇಲ್ಲಿನ ನಿವಾಸಿ ಅವರಿಂದ 74.50 ಲಕ್ಷ ರೂಪಾಯಿ ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇದುವರೆಗೆ ಬಂಧಿಸಿಲ್ಲ. ತನಿಖೆ ಮುಂದುವರಿದಿದೆ ಎಂದು ಕಸರ್ವಾಡವ್ಲಿ ಪೊಲೀಸ್ ಠಾಣೆ ಅಧಿಕಾರಿಗಳು ಹೇಳಿದ್ದಾರೆ.
"ಕೊಚ್ಚಿ ಮೂಲದ ವ್ಯಕ್ತಿಯೊಬ್ಬರು ಥಾಣೆಯ ಮೆಷಿನರಿ ಸರಬರಾಜು ಮಾಡುವ ವ್ಯಕ್ತಿ ವಿರುದ್ಧ ಈ ಸಂಬಂಧ ದೂರು ನೀಡಿದ್ದು, ಆರೋಪಿ ಹಣ ತೆಗೆದುಕೊಂಡು ಚೀನಾ ನಿರ್ಮಿತ ಮಾಸ್ಕ್ ತಯಾರಿಕೆ ಮೆಷಿನ್ ತರಿಸಿಕೊಡುವುದಾಗಿ ಭರವಸೆ ನೀಡಿದ್ದ ಎಂದು ಆಪಾದಿಸಲಾಗಿದೆ"
Next Story