ಕ್ರಿಕೆಟ್ ಬೆಟ್ಟಿಂಗ್: ಆರೋಪಿಯ ಬಂಧನ, 4.50 ಲಕ್ಷ ರೂ. ವಶ

ಬೆಂಗಳೂರು, ಡಿ.9: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬೆಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದು, 4.5 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಭುವನೇಶ್ವರಿ ನಗರದ ಚಲುವಪ್ಪ ಗಾರ್ಡನ್ 4ನೇ ಕ್ರಾಸ್ ನಿವಾಸಿ ಪ್ರಭು(33) ಬಂಧಿತ ಆರೋಪಿ. ಬಂಧಿತನಿಂದ 4.5 ಲಕ್ಷ ರೂ. ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಶ್ರೀಲಂಕಾದಲ್ಲಿ ನಡೆಯುತ್ತಿರುವ ಎಲ್‌ಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿ ಮೊಬೈಲ್ ಆ್ಯಪ್/ವೆಬ್‌ಸೈಟ್ ಮೂಲಕ ಬೆಟ್ಟಿಂಗ್‌ನಲ್ಲಿ ನಿರತನಾಗಿದ್ದನೆನ್ನಲಾಗಿದೆ. ಬೆಟ್ಟಿಂಗ್ ಗೆದ್ದವರಿಗೆ ಹಣ ನೀಡಲು ಮತ್ತು ಸೋತವರಿಂದ ಹಣ ಪಡೆಯುವ ಉದ್ದೇಶದಿಂದ ಆರೋಪಿಯು ನಗರದ ರಾಮದಾಸ್ ಲೇಔಟ್ ಬಳಿ ನಿಂತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಕೆ.ಪಿ.ಅಗ್ರಾಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





