ಕೋವಿಡ್-19 ರೋಗಿಗಳ ಮನೆಗಳ ಹೊರಗೆ ನೋಟಿಸ್ ಅಂಟಿಸಬಾರದು: ಸುಪ್ರೀಂಕೋರ್ಟ್

ಹೊಸದಿಲ್ಲಿ: ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡಿರುವ ಸುಪ್ರೀಂಕೋರ್ಟ್ ದೇಶದಲ್ಲಿ ಕೋವಿಡ್-19 ರೋಗಿಗಳ ಮನೆಗಳ ಹೊರಗೆ ಪೋಸ್ಟರ್ ಗಳು ಹಾಗೂ ಯಾವುದೇ ಸಂಕೇತಗಳನ್ನು ಅಂಟಿಸಬಾರದು ಎಂದು ತೀರ್ಪು ನೀಡಿದೆ.
ಕೊರೋನ ವೈರಸ್ ಸೋಂಕಿತರಾಗಿರುವವರ ಮನೆಯ ಹೊರಗೆ ನೋಟಿಸ್ ಹಚ್ಚುವ ಅಭ್ಯಾಸವನ್ನು ನಿಲ್ಲಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ಜಸ್ಟಿಸ್ ಅಶೋಕ್ ಭೂಷಣ್ ನೇತೃತ್ವದ ಪೀಠ ಈ ತೀರ್ಪು ನೀಡಿದೆ.
ಕೇಂದ್ರ ಸರಕಾರ ಈಗಾಗಲೇ ಮಾರ್ಗಸೂಚಿಗಳನ್ನು ನೀಡಿದೆ. ಹೀಗಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇಂತಹ ಪೋಸ್ಟರ್ ಗಳನ್ನು ಹಚ್ಚಬಾರದು ಎಂದು ಜಸ್ಟಿಸ್ ಗಳಾದ ಎಎಸ್ ರೆಡ್ಡಿ ಹಾಗೂ ಎಂ ಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
Next Story





