ಫೋರ್ಬ್ಸ್ ವಿಶ್ವದ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ಫೋರ್ಬ್ಸ್ ಪ್ರಕಟಿಸಿರುವ ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ ಎರಡನೇ ವರ್ಷ ಸ್ಥಾನ ಪಡೆದಿದ್ದಾರೆ.
ಅಮೆರಿಕದ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಬಯೋಕಾನ್ ಸ್ಥಾಪಕಿ ಕಿರಣ್ ಮಝೂಂದಾರ್ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸತತ 10ನೇ ವರ್ಷ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಅಗ್ರಸ್ಥಾನ ಪಡೆದಿದ್ದಾರೆ.
ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಸೀತಾರಾಮನ್ 41ನೇ ಸ್ಥಾನದಲ್ಲಿದ್ದಾರೆ. 2019ರಲ್ಲಿ 34ನೇ ಸ್ಥಾನದಲ್ಲಿದ್ದರು.
Next Story





