ಡಿ. 13ರಂದು ಲಯನ್ಸ್ ಕ್ಲಬ್ ಮಂಗಳೂರು ಸೆಂಚೂರಿಯನ್ ಉದ್ಘಾಟನೆ
ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥೆಗೆ ಲಯನ್ಸ್ ಕ್ಲಬ್‌ನ ಕೊಡುಗೆ

ಮಂಗಳೂರು, ಡಿ.9: ಸಮಾಜ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ದಿ ವಾಯ್ಸೆ ಆಫ್ ಬ್ಲಡ್ ಡೋನರ್ಸ್‌ನ ಆಯ್ದ ಸದಸ್ಯರ ನ್ನೊಳಗೊಂಡು ತನ್ನ 100ನೆ ಶಾಖೆಯನ್ನು ಆರಂಭಿಸಲು ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ನಿರ್ಧರಿಸಿದೆ.
ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥೆಯ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಅವಕಾಶ ಕಲ್ಪಿಸುವ ಸಲುವಾಗಿ ಲಯನ್ಸ್ ಕ್ಲಬ್ ಮಂಗಳೂರು ಸೆಂಚೂರಿಯನ್ ಕ್ಲಬ್ ಇದೀಗ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಆಯ್ದ 23 ಸದಸ್ಯರೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಲಯನ್ಸ್ ಕ್ಲಬ್ ಗವರ್ನರ್ ಡಾ.ಗೀತಾ ಪ್ರಕಾಶ್ ಅವರು ಬುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ಕ್ಲಬ್ಬಿನ ಲೋಗೋ ಅನಾವರಣಗೊಳಿಸಿ ಮಾತನಾಡಿದ ಅವರು, ರಕ್ತದಾನ ಸೇರಿದಂತೆ ಹಲವಾರು ರೀತಿಯ ಸಮಾಜ ಸೇವೆ ಗಳನ್ನು ಗುರುತಿಸಿ ವಿಶೇಷ ಪರಿಕಲ್ಪನೆಯಡಿ, ಅದರ ಆಯ್ದ ಸದಸ್ಯರನ್ನು ಒಳಗೊಂಡಂತೆ ಲಯನ್ಸ್‌ಕ್ಲಬ್‌ನ 100ನೆ ಘಟಕವನ್ನು ಲಯನ್ಸ್ ಕ್ಲಬ್ ಮಂಗಳೂರು ಸೆಂಚೂರಿಯನ್ ಸಂಸ್ಥೆಯಾಗಿ ರೂಪುಗೊಳಿಸಲಾಗಿದೆ. ಡಿ. 13ರಂದು ಲಯನ್ಸ್ ಸೇವಾ ಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಈ ಘಟಕದ ಅಧಿೃತ ಉದ್ಘಾಟನೆ ನಡೆಯಲಿದೆ ಎಂದರು.
15 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸಮಾನ ಮನಸ್ಕ ಸಂಘಟನೆಗಳು ಸೇರಿ 3 ವರ್ಷಗಳ ಹಿಂದೆ ದಿ ವಾಯ್ಸ ಆಫ್ ಬ್ಲಡ್ ಡೋನರ್ಸ್ ಕ್ಲಬ್ ಹುಟ್ಟುಹಾಕಲಾಗಿದೆ. ಇದುವರೆಗೆ 3 ಸಾವಿರಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಿ ಅದನ್ನು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಗೆ ನೀಡಲಾಗಿದೆ. ಇದಲ್ಲದೆ ಅನಾರೋಗ್ಯಪೀಡಿತರ ಚಿಕಿತ್ಸೆಗೆ ನೆರವು, ಬಡವರಿಗೆ ಪ್ರತಿ ವರ್ಷ 25ರಿಂದ 35 ಕ್ವಿಂಟಾಲ್ ಅಕ್ಕಿ ವಿತರಣೆ, ರಮ್ಜಾನ್‌ನಲ್ಲಿ ಕಿಟ್ ವಿತರಣೆ, ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸಿದೆ ಎಂದು ದಿ ವಾಯ್ಸಾ ಆಫ್ ಬ್ಲಡ್ ಡೋನರ್ಸ್‌ನ ಕಾರ್ಯದರ್ಶಿ ರುಬಿಯಾ ಅಖ್ತರ್ ತಿಳಿಸಿದರು.
ಗೋಷ್ಠಿಯಲ್ಲಿ ಲಯನ್ಸ್ ಕ್ಲಬ್‌ನ ಗೋವರ್ದನ್ ಶೆಟ್ಟಿ, ಲಾರೆನ್ಸ್ ಎಂ. ಲೋಬೋ,ಅಶೋಕ್ ಪಿಂಟೋ, ಚಂದ್ರಹಾಸ ಶೆಟ್ಟಿ, ಮಂಗೇಶ್ ಭಟ್, ದಿ ವಾಯ್ಸಿ ಆಫ್ ಬ್ಲಡ್ ಡೋನರ್ಸ್‌ನ ಸ್ಥಾಪಕ ಅಧ್ಯಕ್ಷ ಅಬ್ದುಲ್ ರವೂಫ್, ಸಹ ಸಂಸ್ಥಾಪಕ ಫರ್ಹಾನ್ ಸಾದತ್, ಮುಹಮ್ಮದ್ ತೌಹೀದ್ ಮೊದಲಾದವರು ಉಪಸ್ಥಿತರಿದ್ದರು.







