ಕೆಥೋಲಿಕ್ ಕ್ರೆಡಿಟ್ ಕೋಆಪ್ ಸೊಸೈಟಿಯ ವಾರ್ಷಿಕ ಮಹಾಸಭೆ

ಉಡುಪಿ, ಡಿ.9: ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 23ನೇ ವಾರ್ಷಿಕ ಮಹಾಸಭೆ ಉಡುಪಿ ಡೊನ್‌ಬೊಸ್ಕೋ ಸಭಾ ಭವನದಲ್ಲಿ ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಶೋಕಮಾತಾ ಇಗರ್ಜಿಯ ಧರ್ಮಗುರು ಗಳಾದ ವಂ.ಚಾರ್ಲ್ಸ್ ಮಿನೇಜಸ್ ಆಗಮಿಸಿದ್ದರು. ಸಂಘದ ಅಧ್ಯಕ್ಷ ಎಲೋಶಿಯಸ್ ಡಿ ಅಲ್ಮೇಡಾ ಅತಿಥಿಗಳನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಸೊಸೈಟಿಯ ನಿರ್ದೇಶಕರಾದ ಫೆಲಿಕ್ಸ್ ಪಿಂಟೋ, ಇಗ್ನೇಷಿಯಸ್ ಮೊನಿಸ್, ಪ್ರಾಂಕ್ಷಿನ್ ಮಿನೇಜಸ್, ಪರ್ಸಿ ಜೆ.ಡಿಸೋಜ, ಜೇಮ್ಸ್ ಡಿಸೋಜ, ಆರ್ಚಿಬೋಲ್ಡ್ ಡಿಸೋಜ ಕೆವಿನ್ ಪಿರೇರಾ, ಜೆಸಿಂತಾ ಡಿಸೋಜ, ಡಾ.ನೇರಿ ಕರ್ನೇಲಿಯೊ, ಗಿಲ್ಬರ್ಟ್ ಫೆರ್ನಾಂಡೀಸ್ ಹಾಗೂ ಕಾರ್ಯದರ್ಶಿ ಪ್ರಾಂಕ್ ಕಾರ್ಜೋಜಾ ಉಪಸ್ಥಿತರಿದ್ದರು.
ನಿರ್ದೇಶಕಿ ಲೊಯ್ಲೆಟ್ ಕರ್ನೇಲಿಯೊ ಕಾರ್ಯಕ್ರಮ ನಿರೂಪಿಸಿದರೆ, ಉಪಾಧ್ಯಕ್ಷ ಲೂವಿಸ್ ಲೋಬೊ ವಂದಿಸಿದರು.
Next Story





