ಸಿಟಿ ಗೋಲ್ಡ್‌ನಿಂದ ‘ಮೆಗಾ ಮಂಗಳೂರು ಫೆಸ್ಟ್’ : 2ನೇ ವಾರದ ಲಕ್ಕೀ ಡ್ರಾ ಸಮಾರಂಭ

ಮಂಗಳೂರು, ಡಿ. 9: ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್‌ನ 20ನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿನ ಸಿಟಿ ಗೋಲ್ಡ್ ಮಳಿಗೆಯಲ್ಲಿ ಡಿಸೆಂಬರ್‌ವರೆಗೆ ‘ಮೆಗಾ ಮಂಗಳೂರು ಫೆಸ್ಟ್’ ಆಯೋಜಿಸಿದೆ. ಈ ಪ್ರಯುಕ್ತ ಎರಡನೇ ವಾರದ ಲಕ್ಕೀ ಡ್ರಾ ಸಮಾರಂಭವು ಬುಧವಾರ ಸಂಜೆ ನಡೆಯಿತು.
ಎರಡನೇ ಲಕ್ಕೀ ಡ್ರಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ, ಬಡವರು ದುಡಿಮೆಯ ಭಾಗದಲ್ಲಿ ಉಳಿತಾಯ ಮಾಡಿ ಚಿನ್ನ ಖರೀದಿಸುತ್ತಾರೆ. ಅಂತಹವರಲ್ಲಿ ಅದೃಷ್ಟಶಾಲಿಗಳಿಗೆ ಸಿಟಿ ಗೋಲ್ಡ್‌ನಿಂದ ಡೈಮಂಡ್ ರಿಂಗ್ ನೀಡುತ್ತಿರು ವುದು ಶ್ಲಾಘನೀಯ. ಗ್ರಾಹಕರಿಗೆ ಸಂತೈಸಲು ಸಂಸ್ಥೆಯು ತನ್ನ ಆದಾಯದಲ್ಲೇ ಒಂದು ಭಾಗವನ್ನು ಕೊಡುಗೆಯಾಗಿ ನೀಡುತ್ತಿರುವುದು ಸಂತ ಸದ ವಿಚಾರ. ಗ್ರಾಹಕರಿಗೆ ಕೊಡುಗೆ ನೀಡುವ ಪರಂಪರೆ ಮುಂದುವರಿಯಲಿ. ಸಂಸ್ಥೆಯು ತನ್ನ ವ್ಯಾಪಾರ-ವಹಿವಾಟನ್ನು ವೃದ್ಧಿಗೊಳಿಸಲಿ ಎಂದು ಶುಭ ಹಾರೈಸಿದರು.
ಎಸ್‌ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಮಾತನಾಡಿ, ಸಿಟಿಗೋಲ್ಡ್ ಸಂಸ್ಥೆಯು ಮೂಲತಃ ಕೇರಳದ್ದು. ಆದರೂ ಮಂಗಳೂರಿನಲಿ ‘ಮೆಗಾ ಮಂಗಳೂರು ಫೆಸ್ಟ್’ ಆಚರಿಸುತ್ತಿರುವುದು ಸ್ವಾಗತಾರ್ಹ. ಲಕ್ಕೀ ಡ್ರಾದಲ್ಲಿ ಬಡವರೇ ಅದೃಷ್ಟಶಾಲಿಗಳಾಗಿ ಆಯ್ಕೆ ಯಾಗಿರುವುದು ದೇವರ ಕೃಪೆ. ಯಾವ ವಸ್ತು ಯಾರಿಗೆ ತಲುಪಬೇಕೋ ಅವರಿಗೆ ತಲುಪಲಿದೆ ಎನ್ನುವುದಕ್ಕೆ ನಿದರ್ಶನ. ಸಂಸ್ಥೆಯು ಗ್ರಾಹಕರಿಗೆ ಡೈಮಂಡ್ ರಿಂಗ್ ಉಡುಗೊರೆಯಾಗಿ ನೀಡುತ್ತಿರುವುದು ಕೂಡ ಒಂದು ಸಮಾಜ ಸೇವೆಯಾಗಿದೆ. ಸಂಸ್ಥೆಯು ಆಭರಣ ಕ್ಷೇತ್ರದಲ್ಲಿ ಇನ್ನಷ್ಟು ಬೆಳವಣಿಗೆ ಸಾಧಿಸಲಿ ಎಂದು ಶುಭ ಹಾರೈಸಿದರು.
ಎರಡನೇ ವಾರದ ಲಕ್ಕೀ ಡ್ರಾದ ಅದೃಷ್ಟಶಾಲಿಯಾಗಿ ಅಹ್ಮದ್ ಹಾರಿಸ್ ನೀರುಮಾರ್ಗ ಆಯ್ಕೆಯಾದರು. ಇದೇ ಸಂದರ್ಭ ಮೊದಲ ವಾರದ ಲಕ್ಕೀ ಡ್ರಾದ ವಿಜೇತ ಮುಹಮ್ಮದ್ ಫಾರೂಕ್ ಅವರಿಗೆ ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು ಡೈಮಂಡ್ ರಿಂಗ್‌ನ್ನು ಉಡುಗೊರೆ ಯಾಗಿ ನೀಡಲಾಯಿತು.
ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಹಬೀಬ್ ಕಣ್ಣೂರು, ಸಿಟಿಗೋಲ್ಡ್ ಸಂಸ್ಥೆಯ ಮ್ಯಾನೇಜರ್ ಅಹ್ಮದ್ ಹಾಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್, ಗ್ರಾಹಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬಂಪರ್ ಬಹುಮಾನ: ಸಿಟಿ ಗೋಲ್ಡ್‌ನ ಮೆಗಾ ಮಂಗಳೂರು ಫೀಸ್ಟ್ ಅಂಗವಾಗಿ ಗ್ರಾಹಕರಿಗೆ ಬಂಪರ್ ಬಹುಮಾನಗಳನ್ನು ಪ್ರಕಟಿಸಲಾ ಗುತ್ತಿದೆ. ಎಕ್ಸ್‌ಕ್ಲೂಸಿವ್ ಡೈಮಂಡ್ ನೆಕ್ಲೆಸ್‌ನ್ನು ಬಂಪರ್ ಬಹುಮಾನವಾಗಿ ಗೆಲ್ಲುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.
ವೀಕ್ಲಿ ಲಕ್ಕೀ ಡ್ರಾ: ಸಿಟಿ ಗೋಲ್ಡ್‌ನಿಂದ ಗ್ರಾಹಕರಿಗಾಗಿ ಹಲವು ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು, ಪ್ರತೀ ವಾರವೂ ಲಕ್ಕೀ ಡ್ರಾ ಹಮ್ಮಿಕೊಳ್ಳಲಾಗಿದೆ. ನೊರಾ ಇಟಾಲಿಯನ್ ಕಲೆಕ್ಷನ್ಸ್, ಕೆನ್ನಾ ಯುನಿಕ್ ಡೈಮಂಡ್ಸ್ ಪ್ರದರ್ಶನ, ಮಾರಾಟವನ್ನು ಆಯೋಜಿಸಲಾಗುತ್ತಿದೆ.
ಮೇಕಿಂಗ್ ಚಾರ್ಜೆಸ್ ಕಡಿತ: ಗೋಲ್ಡ್‌ನಲ್ಲಿ ಶೇ.55, ಡೈಮಂಡ್ಸ್‌ನಲ್ಲಿ ಶೇ.25, ಅನ್‌ಕಟ್ ಆಭರಣಗಳಲ್ಲಿ ಶೇ.25 ರಷ್ಟು ಕಡಿತದ ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದೆ. ಅಲ್ಲದೆ, ಬೆಲೆಬಾಳುವ ನೆಕ್ಲೇಸ್ ಮೇಲೆ ಯಾವುದೇ ರೀತಿಯ ಮೇಕಿಂಗ್ ಚಾರ್ಜೆಸ್ ಇರುವುದಿಲ್ಲ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
















