ಉಡುಪಿ: ಕಾಂಗ್ರೆಸ್ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಸಹಿತ ಹಲವರು ಬಿಜೆಪಿ ಸೇರ್ಪಡೆ

ಉಡುಪಿ, ಡಿ. 9: ದಲಿತ ಮುಖಂಡ, ಉಡುಪಿ ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ಎಸ್.ನಾರಾಯಣ್ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ಮುಖಂಡರು ಇಂದು ಶಾಸಕ ಕೆ.ರಘುಪತಿ ಭಟ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಎಸ್.ನಾರಾಯಣ್ ವಾರಂಬಳ್ಳಿ ಗ್ರಾಪಂ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ನಿತ್ಯಾ ನಂದ ಬಿ.ಆರ್., ನವೀನ್ ಚಂದ್ರ ನಾಯಕ್, ಕಾಂಗ್ರೆಸ್ ಬೆಂಬಲಿತ ಮಾಜಿ ಸದಸ್ಯರು ಗಳಾದ ರಾಜು ಸಾಲ್ಯಾನ್, ದೇವಾನಂದ, ಕ್ರಿಸ್ತೀನ್, ಗೋಪಾಲ ದೇವಾಡಿಗ, ಕವಿತಾ, ಹೇಮಾ ಶೆಟ್ಟಿಗಾರ್, ಸದಾನಂದ ಪೂಜಾರಿ, ಗುಲಾಬಿ ಕುಂದರ್ ಮತ್ತು ಸುರೇಶ್ ಬಿರ್ತಿ ಸೇರಿದಂತೆ ಒಟ್ಟು 12 ಮಂದಿಯನ್ನು ಶಾಸರು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅಶೋಕ್ ಹೇರೂರು, ವಾರಂಬಳ್ಳಿ ಗ್ರಾಪಂ ಚುನಾವಣಾ ಉಸ್ತುವಾರಿ ಸುಧೀರ್ ಶೆಟ್ಟಿ, ಪಕ್ಷದ ಮುಖಂಡರಾದ ನಿಶಾನ್ ರೈ, ಬಿರ್ತಿ ರಾಜೇಶ್ ಶೆಟ್ಟಿ, ತಾಪಂ ಸದಸ್ಯೆ ಕುಸುಮ, ಮಾಜಿ ಸದಸ್ಯ ಉಮೇಶ್ ನಾಯ್ಕ್, ಜಿಲ್ಲಾ ಕಾರ್ಯಕಾರಣಿ ಸದಸ್ಯ ನಾಗವೇಣಿ, ಬ್ರಹ್ಮಾವರ ಮಹಾಶಕ್ತಿ ಕೇಂದ್ರದ ಸದಸ್ಯರಾದ ಉಲ್ಲಾಸ್ ವಾರಂಬಳ್ಳಿ ಮತ್ತು ಹರೀಶ್ ಶೆಟ್ಟಿ ಚೇರ್ಕಾಡಿ ಮೊದ ಲಾದವರು ಉಪಸ್ಥಿತರಿದ್ದರು.