ಡಿ.11: ಮಂಗಳೂರಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಮಂಗಳೂರು, ಡಿ.9: ಕಂದಾವರ-ಪಳ್ನೀರ್ ಘಟನೆಗಳ ಸಾಕ್ಷ ಇದ್ದರೂ ಇಲ್ಲಿಯವರೆಗೆ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಡಿ.11ರಂದು ಅಪರಾಹ್ನ 3 ಗಂಟೆಗೆ ನಗರದ ಮಿನಿ ವಿಧಾನಸೌಧದ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಮುಸ್ಲಿಂ ಸಂಘಟನೆಗಳ ಒಕ್ಕೂಟ ತೀರ್ಮಾನಿಸಿದೆ.
ನ.15ರಂದು ರಾತ್ರಿ ಕಂದವಾರ ಮಸೀದಿಯಲ್ಲಿ ನಮಾಜ್ ಮುಗಿಸಿ ಹಿಂದಿರುಗುತ್ತಿದ್ದ ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ವೆನ್ಜ್ ಅಬ್ದುಲ್ಲ ಅವರ ಕೊಲೆಯತ್ನ ನಡೆದಿತ್ತು. ಅವರನ್ನು ನಗರದ ತೀವ್ರ ನಿಘಾ ಘಟಕಕ್ಕೆ ದಾಖಲಿಸಲಾಗಿತ್ತು. ಘಟನೆ ನಡೆದು 20 ದಿನಗಳಾದರೂ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ಇದುವರೆಗೆ ಬಂಧನವಾಗದಿರುವುದು ಖೇದಕರ ಎಂದು ಒಕ್ಕೂಟ ಬೇಸರ ವ್ಯಕ್ತಪಡಿಸಿದೆ.
ಇದಾದ ಬಳಿಕ ನ.23ರಂದು ರಾತ್ರಿ ವೇಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೆನ್ಜ್ ಅಬ್ದುಲ್ಲ ಆರೋಗ್ಯ ಶುಶ್ರೂಷೆ ನೋಡಿಕೊಳ್ಳುತ್ತಿದ್ದ ಅವರ ಅಳಿಯ ನೌಷಾದ್ ಎಂಬವರ ಕೊಲೆ ಯತ್ನ ನಡೆಯಿತು. ಈ ಎರಡು ಘಟನೆಗಳ ವೀಡಿಯೊ ಪೋಟೇಜ್‌ಗಳು ಹಾಗೂ ವಿವಿಧ ನಿಖರ ಮಾಹಿತಿ ಗಳನ್ನು ಪೊಲೀಸ್ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದರೂ ಒಂದೇ ಒಂದು ಆರೋಪಿಗಳನ್ನು ಬಂಧಿಸದಿರುವುದು ಸಂದೇಹಕ್ಕೆ ಎಡೆ ಮಾಡಿದೆ ಎಂದು ಒಕ್ಕೂಟ ಆರೋಪಿಸಿದೆ.
ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬವಾದಲ್ಲಿ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಲಿದೆ. ಆರೋಪಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಪಾತಕ ಕೃತ್ಯಕ್ಕೆ ಇಳಿಯು ವವರಿಗೆ ಎಚ್ಚರಿಕೆ ನೀಡುವಂತಾಗಬೇಕು ಎಂದು ಮುಸ್ಲಿಂ ಸಂಘಟನೆಗಳ ಒಕ್ಕೂಟ ಪ್ರಕಟನೆಯಲ್ಲಿ ತಿಳಿಸಿದೆ.







