5 ನಿಮಿಷಗಳ ಕಾಗದ ಆಧಾರಿತ ಕೊರೋನ ಪರೀಕ್ಷೆ: ಭಾರತ ಮೂಲದ ವಿಜ್ಞಾನಿ ನೇತೃತ್ವದ ತಂಡದ ಸಾಧನೆ

ವಾಶಿಂಗ್ಟನ್, ಡಿ. 9: ಕಾಗದ ಆಧಾರಿತ ಇಲೆಕ್ಟ್ರೋಕೆಮಿಕಲ್ ಸೆನ್ಸರ್ ಬಳಸಿ ಕೋವಿಡ್-19 ಸಾಂಕ್ರಾಮಿಕವನ್ನು ಪತ್ತೆಹಚ್ಚುವ ಕ್ಷಿಪ್ರ ಹಾಗೂ ಅತಿ ಸೂಕ್ಷ್ಮ ಪರೀಕ್ಷೆಯೊಂದನ್ನು ಭಾರತ ಮೂಲದ ವಿಜ್ಞಾನಿಯ ನೇತೃತ್ವದ ತಂಡವೊಂದು ಅಭಿವೃದ್ಧಿಪಡಿಸಿದೆ. ಈ ಪರೀಕ್ಷೆಯು ನೋವೆಲ್ ಕೊರೋನ ವೈರಸನ್ನು ಐದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪತ್ತೆಹಚ್ಚಬಲ್ಲದು ಎನ್ನಲಾಗಿದೆ.
ಪ್ರೊಫೆಸರ್ ದೀಪಂಜನ್ ಪಾನ್ ನೇತೃತ್ವದ ಇಲಿನಾಯಿಸ್ ವಿಶ್ವವಿದ್ಯಾನಿಲಯದ ಸಂಶೋಧಕರು, ಕೊರೋನ ವೈರಸ್ ವಂಶವಾಹಿಯ ಉಪಸ್ಥಿತಿಯನ್ನು ಪತ್ತೆಹಚ್ಚುವುದಕ್ಕಾಗಿ ಇಲೆಕ್ಟ್ರಿಕಲ್ ರೀಡ್-ಔಟ್ ವ್ಯವಸ್ಥೆಯಿರುವ ಗ್ರಾಫೀನ್ ಆಧಾರಿತ ಇಲೆಕ್ಟ್ರೋಕೆಮಿಕಲ್ ಬಯೋಸೆನ್ಸರ್ ಸೃಷ್ಟಿಸಿದ್ದಾರೆ.
ಈ ಪರೀಕ್ಷಾ ಉಪಕರಣಗಳನ್ನು ಸುಲಭವಾಗಿ ಒಯ್ಯಬಹುದು ಹಾಗೂ ಖರ್ಚೂ ಕಡಿಮೆ. ಹಾಗಾಗಿ, ಈ ಪರೀಕ್ಷೆಗೆ ಹಲವು ಬಳಕೆಗಳು ಇರಲಿವೆ ಎಂದು ‘ಎಸಿಎಸ್ ನ್ಯಾನೋ’ ಪತ್ರಿಕೆಯಲ್ಲಿ ಪ್ರಕಟಗೊಂಡ ಸಂಶೋಧನಾ ವರದಿ ತಿಳಿಸಿದೆ.
Next Story





