ಬೋಳಾರ : ಡಿ.11ರಂದು ಯುನಿವೆಫ್ ನಿಂದ ಸೀರತ್ ಕಾರ್ಯಕ್ರಮ
ಮಂಗಳೂರು : ಯುನಿವೆಫ್ ಕರ್ನಾಟಕ ನ.27 ರಿಂದ 2021ರ ಜ.29ರವರೆಗೆ "ಸಾಮಾಜಿಕ ತಾರತಮ್ಯ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ ಮಂಗಳೂರು ಶಾಖೆಯ ವತಿಯಿಂದ ಡಿ.11ರ ರಾತ್ರಿ 8ಗಂಟೆಗೆ ಬೋಳಾರದ ಶಾದಿ ಮಹಲ್ ನಲ್ಲಿ ಸೀರತ್ ಕಾರ್ಯಕ್ರಮ ಜರಗಲಿದೆ.
"ಭಾರತದ ನಾಗರಿಕತೆಗೆ ಪ್ರವಾದಿ(ಸ)ರ ಕೊಡುಗೆ' ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಉಪನ್ಯಾಸ ನೀಡಲಿದ್ದಾರೆ. ಬೋಳಾರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಹುಸೈನ್ ಬೋಳಾರ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಯುನಿವೆಫ್ ಕಾರ್ಯದರ್ಶಿಗಳಾದ ಯು. ಕೆ. ಖಾಲಿದ್ ಮತ್ತು ಸೈಫುದ್ದೀನ್, ಅಭಿಯಾನ ಸಂಚಾಲಕ ವಕಾಝ್ ಅರ್ಶಲನ್ ಮತ್ತು ಸಹ ಸಂಚಾಲಕ ಅತೀಖುರ್ರಹ್ಮಾನ್ ಉಪಸ್ಥಿತರಿರುವರು ಎಂದು ಯುನಿವೆಫ್ ಪ್ರಕಟಣೆ ತಿಳಿಸಿದೆ.
Next Story





