ಶಂಕರನಾರಾಯಣ: ಕಾಲೇಜು ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ
ಅಮಾಸೆಬೈಲು, ಡಿ.10: ಶಂಕರನಾರಾಯಣ ಸರಕಾರಿ ಪದವಿ ಕಾಲೇಜಿನಲ್ಲಿ ಅಂತಿಮ ಬಿಕಾಂ ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೃತಳನ್ನು ಅಮಾಸೆಬೈಲು ಗ್ರಾಮ ಜಡ್ಡಿನಗದ್ದೆ ಹುಣಸೆಮನೆಯ ರುಕ್ಮಿಣಿ ಎಂಬವರ ಪುತ್ರಿ ದಿವ್ಯಾ (19) ಎಂದು ಗುರುತಿಸಲಾಗಿದೆ. ದಿವ್ಯಾ ಬುಧವಾರ ಕಾಲೇಜಿಗೆ ಹೋಗಿ ಬಂದವಳು ಚಿಂತೆಯಲ್ಲಿದ್ದು, ಇಂದು ಬೆಳಗ್ಗೆ 9ರಿಂದ 11ಗಂಟೆ ನಡುವಿನ ಅವಧಿಲ್ಲಿ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story