ಗೂಗಲ್, ಅಮೆಝಾನ್ ಘಟಕಗಳಿಗೆ ಭಾರೀ ದಂಡ ವಿಧಿಸಿದ ಫ್ರಾನ್ಸ್

ಪ್ಯಾರಿಸ್ (ಫ್ರಾನ್ಸ್), ಡಿ. 10: ಕುಕೀ (ಕಂಪ್ಯೂಟರ್ ಬಳಕೆದಾರರು ಇಂಟರ್‌ನೆಟ್‌ನಲ್ಲಿ ಹುಡುಕಾಡಿದ ಆಧಾರದಲ್ಲಿ ಕಂಪ್ಯೂಟರ್‌ನಲ್ಲಿ ದಾಖಲಾದ ಅವರ ಇಷ್ಟಾನಿಷ್ಟಗಳ ವಿವರಗಳು; ಬಳಕೆದಾರರ ಹಿಂದಿನ ಚಟುವಟಿಕೆಗಳನ್ನು ತಿಳಿದುಕೊಳ್ಳಲು ವೆಬ್‌ಸೈಟ್‌ಗಳು ಈ ವಿವರಗಳನ್ನು ಬಳಸಿಕೊಳ್ಳುತ್ತವೆ)ಗಳನ್ನು ಜಾಹೀರಾತುಗಳಿಗಾಗಿ ಬಳಸಿಕೊಂಡಿರುವುದಕ್ಕಾಗಿ ಗೂಗಲ್‌ನ ಎರಡು ಘಟಕಗಳು ಮತ್ತು ಅಮೆಝಾನ್‌ನ ಉಪ ಸಂಸ್ಥೆಯೊಂದಕ್ಕೆ ಫ್ರಾನ್ಸ್‌ನ ಮಾಹಿತಿ ಖಾಸಗಿತನ ನಿಗಾ ಸಂಸ್ಥೆ ಸಿಎನ್‌ಐಎಲ್ ಭಾರೀ ಪ್ರಮಾಣದ ದಂಡ ವಿಧಿಸಿದೆ.
ಗೂಗಲ್‌ನ ಘಟಕಗಳಿಗೆ ಒಟ್ಟು 100 ಮಿಲಿಯ ಯುರೋ (ಸುಮಾರು 8,900 ಕೋಟಿ ರೂಪಾಯಿ) ಮತ್ತು ಅಮೆಝಾನ್‌ನ ಉಪ ಸಂಸ್ಥೆಗೆ 35 ಮಿಲಿಯ ಯುರೋ (ಸುಮಾರು 312 ಕೋಟಿ ರೂಪಾಯಿ) ದಂಡ ವಿಧಿಸಲಾಗಿದೆ.
ಬಳಕೆದಾರರ ಅನುಮಿತ ಇಲ್ಲದೆಯೇ ಈ ವೆಬ್ ಕಂಪೆನಿಗಳು ಅವರ ವಿವರಗಳನ್ನು ಜಾಹೀರಾತು ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿರುವುದಕ್ಕಾಗಿ ಈ ದಂಡ ವಿಧಿಸಲಾಗಿದೆ ಎಂದು ಸಿಎನ್‌ಐಎಲ್ ತಿಳಿಸಿದೆ.
Next Story