ನೂತನ ಕೃಷಿ ಕಾನೂನುಗಳು 'ದೋಷಪೂರಿತ', 'ರೈತರ ಹಿತಾಸಕ್ತಿಗೆ ವಿರುದ್ಧ'
ವಿಶ್ವ ಬ್ಯಾಂಕ್ನ ಮಾಜಿ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು
ಕೌಶಿಕ್ ಬಸು
ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯಿದೆಗಳು 'ದೋಷಪೂರಿತ' ಹಾಗೂ 'ರೈತರ ಹಿತಾಸಕ್ತಿಗೆ ವಿರುದ್ಧವಾಗಿವೆ' ಎಂದು ವಿಶ್ವ ಬ್ಯಾಂಕ್ನ ಮಾಜಿ ಮುಖ್ಯ ಆರ್ಥಿಕ ತಜ್ಞ ಹಾಗೂ ಕೊರ್ನೆಲ್ಲ್ ವಿವಿಯ ಅರ್ಥಶಾಸ್ತ್ರ ಪ್ರೊಫೆಸರ್ ಕೌಶಿಕ್ ಬಸು ಹೇಳಿದ್ದಾರೆ.
ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರೂ ಆಗಿರುವ ಕೌಶಿಕ್ ಅವರು ತಮ್ಮ ಅಭಿಪ್ರಾಯಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. "ನಮ್ಮ ಕೃಷಿ ನೀತಿಗಳು ಬದಲಾಗಬೇಕಿದ್ದರೂ ಈ ಹೊಸ ಕಾನೂನುಗಗಳು ರೈತರ ಹಿತಾಸಕ್ತಿಗಿಂತ ಹೆಚ್ಚಾಗಿ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಅಂತಿಮವಾಗಿ ರಕ್ಷಿಸುತ್ತವೆ,'' ಎಂದು ಅವರು ಹೇಳಿಕೊಂಡಿದ್ದಾರೆ ಹಾಗೂ ಪ್ರತಿಭಟನೆ ನಡೆಸುತ್ತಿರುವ ರೈತರ ನೈತಿಕ ಶಕ್ತಿಯನ್ನು ಶ್ಲಾಘಿಸಿದ್ದಾರೆ.
ಕೌಶಿಕ್ ಬಸು ಅವರ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದ್ದು ಕೆಲವರು ಅವರ ನಿಲುವನ್ನು ಬೆಂಬಲಿಸಿದರೆ ಇನ್ನು ಕೆಲವರು ಸರಕಾರದ ಬೆಂಬಲಕ್ಕೆ ನಿಂತಿದ್ದಾರೆ.
I’ve now studied India’s new farm bills & realize they are flawed & will be detrimental to farmers. Our agriculture regulation needs change but the new laws will end up serving corporate interests more than farmers. Hats off to the sensibility & moral strength of India’s farmers.
— Kaushik Basu (@kaushikcbasu) December 11, 2020