ಮಲ್ಪೆ ಭಾದುರಗಡ ದ್ವೀಪದಲ್ಲಿ ಮಾನವನ ಅಸ್ಥಿಪಂಜರ ಪತ್ತೆ
ಮಲ್ಪೆ, ಡಿ.14: ಮಲ್ಪೆ ಪಡುಕೆರೆ ಸಮೀಪದ ಭಾದುರಗಡ ದ್ವೀಪದಲ್ಲಿ ಡಿ.9 ರಂದು ರಾತ್ರಿ ವೇಳೆ ಮೃತ ವ್ಯಕ್ತಿಯ ಅಸ್ಥಿಪಂಜರವು ರುಂಡ ಮತ್ತು ಮುಂಡ ಬೇರೆ ಬೇರೆಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭಾದುರಗಡ ದ್ವೀಪಕ್ಕೆ ಗಾಳ ಹಾಕಿ ಮೀನು ಹಿಡಿಯಲು ಹೋದವರಿಗೆ ಬಂಡೆಕಲ್ಲುಗಳ ಮದ್ಯದಲ್ಲಿ ಒಂದು ಅಪರಿಚಿತ ಮೃತ ಶರೀರ ಪತ್ತೆಯಾಗಿದೆ. ಪರಿಶೀಲಿಸಿದಾಗ ಮೃತದೇಹದ ರುಂಡ ಹಾಗೂ ಇತರ ಭಾಗಗಳು ಬೇರೆ ಬೇರೆಯಾಗಿರುವುದು ಕಂಡುಬಂತು.
ಸಂಪೂರ್ಣ ಕೊಳೆತು ಅಸ್ಥಿಪಂಜರವಾಗಿರುವ ಇದರ ಸೊಂಟದಲ್ಲಿ ಒಳಚಡ್ಡಿ ಮಾತ್ರ ಇದ್ದು, ಅಲ್ಲೆ ಪಕ್ಕದಲ್ಲಿ ತಲೆ ಬುರುಡೆ ಹಾಗೂ ಕಾಲುಗಳ ತುಂಡು ಗಳು ಪತ್ತೆಯಾಗಿವೆ. ಈ ವ್ಯಕ್ತಿ ಬೇರೆ ಕಡೆ ಸಮುದ್ರದ ನೀರಿಗೆ ಬಿದ್ದು ಅಥವಾ ಬೇರೆ ಯಾವುದೋ ರೀತಿಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಮೃತಪಟ್ಟಿ ರಬಹುದೆಂದು ಶಂಕಿಸಲಾಗಿದೆ.
ಮಣಿಪಾಲದ ವಿಧಿ ವಿಜ್ಞಾನ ವಿಭಾಗದವರು ಆಗಮಿಸಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story