Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಪ್ರತಿ ದಿನ ಒಂದು ತುಂಡು ಬೆಲ್ಲ ತಿಂದರೆ...

ಪ್ರತಿ ದಿನ ಒಂದು ತುಂಡು ಬೆಲ್ಲ ತಿಂದರೆ ಏನಾಗುತ್ತದೆ?

ವಾರ್ತಾಭಾರತಿವಾರ್ತಾಭಾರತಿ11 Dec 2020 11:14 PM IST
share

ಪ್ರತಿ ದಿನ ಊಟದೊಂದಿಗೆ ಒಂದು ತುಂಡು ಬೆಲ್ಲ ತಿನ್ನುವುದರಿಂದ ಅದ್ಭುತ ಆರೋಗ್ಯಲಾಭಗಳು ನಮ್ಮದಾಗುತ್ತವೆ ಎನ್ನುವುದು ನಿಮಗೆ ಗೊತ್ತೇ? ಬೆಲ್ಲ ತಿನ್ನುವುದು ಜೀರ್ಣಕ್ರಿಯೆಗೆ ವೇಗ ನೀಡುವುದರ ಜೊತೆಗೆ ಇತರ ಹಲವಾರು ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆಯಾಗಿದೆ. ಬೆಲ್ಲ ಆರೋಗ್ಯಕರ ಮಾತ್ರವಲ್ಲ, ಅದು ಸಕ್ಕರೆಗಿಂತ ಅಗ್ಗ ಮತ್ತು ರುಚಿಕರವೂ ಆಗಿದೆ.

ಬೆಲ್ಲ ಪೋಷಕಾಂಶಗಳ ಆಗರವಾಗಿದೆ ಮತ್ತು ಇದೇ ಕಾರಣದಿಂದ ಅದು ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ. ಪ್ರೋಟಿನ್,ಕೊಬ್ಬು,ಪೊಟ್ಯಾಷಿಯಂ, ರಂಜಕ,ಮ್ಯಾಗ್ನೀಷಿಯಂ,ಮ್ಯಾಂಗನೀಸ್,ಕಬ್ಬಿಣ,ಬಿ ವಿಟಾಮಿನ್‌ಗಳು, ಕ್ಯಾಲ್ಸಿಯಂ, ತಾಮ್ರ ಮತ್ತು ಸತುವು ಬೆಲ್ಲದಲ್ಲಿ ಹೇರಳವಾಗಿವೆ.

ಆಸಕ್ತಿಯ ವಿಷಯವೆಂದರೆ ಬೆಲ್ಲವನ್ನು ರಿಫೈನ್ಡ್ ಸಕ್ಕರೆಯು ತಯಾರಾಗುವ ಮೂಲದಿಂದಲೇ ಉತ್ಪಾದಿಸಲಾಗುತ್ತದೆ ಮತ್ತು ಹೆಚ್ಚುಕಡಿಮೆ ಸಕ್ಕರೆಯಲ್ಲಿ ಇರುವಷ್ಟೇ ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ,ಆದರೆ ಸಕ್ಕರೆಗಿಂತ ಹೆಚ್ಚು ಆರೋಗ್ಯಕರವಾಗಿದೆ. ಸಕ್ಕರೆಯು ಶೂನ್ಯ ಪೋಷಕಾಂಶಗಳೊಂದಿಗೆ ಕ್ಯಾಲೊರಿಗಳನ್ನು ಮಾತ್ರ ಹೊಂದಿದ್ದರೆ,ಬೆಲ್ಲವು ಕೆಲವು ವಿಟಾಮಿನ್‌ಗಳು ಮತ್ತು ಖನಿಜಗಳನ್ನೂ ಹೊಂದಿರುತ್ತದೆ ಎನ್ನುವುದು ಇದಕ್ಕೆ ಕಾರಣವಾಗಿದೆ. ಆದರೆ ಬೆಲ್ಲವನ್ನು ನಿಮ್ಮ ಮನಸ್ಸಿಗೆ ಬಂದಂತೆ ತಿನ್ನುವುದಲ್ಲ,ಅದಕ್ಕೂ ಒಂದು ಮಿತಿಯಿದೆ ಎನ್ನುವುದು ನೆನಪಿರಲಿ.ನೀವು ದಿನಕ್ಕೆ ಹೆಚ್ಚೆಂದರೆ 5ರಿಂದ 10 ಗ್ರಾಮ್ ಬೆಲ್ಲವನ್ನು ಸೇವಿಸಬಹುದು. ಬೆಲ್ಲ ಸೇವಿಸುವುದರ ಆರೋಗ್ಯಲಾಭಗಳು ಇಲ್ಲಿವೆ....

► ತೂಕ ಇಳಿಸಲು ನೆರವಾಗುತ್ತದೆ

ನೀವು ನಿಮ್ಮ ದೇಹತೂಕವನ್ನು ಇಳಿಸಿಕೊಳ್ಳಲು ಬಯಸಿದ್ದರೆ ನಿಮ್ಮ ದಿನನಿತ್ಯದ ಆಹಾರದಲ್ಲಿ ಒಂದು ತುಂಡು ಬೆಲ್ಲ ಸೇರಿಸಿಕೊಳ್ಳಿ. ಇದರಲ್ಲಿರುವ ಪೊಟ್ಯಾಷಿಯಂ ಪ್ರಬಲ ಖನಿಜವಾಗಿದ್ದು,ವಿದ್ಯುದ್ವಿಚ್ಛೇದ್ಯಗಳನ್ನು ಸಮತೋಲನಗೊಳಿಸಲು,ಚಯಾಪಚಯವನ್ನು ಹೆಚ್ಚಿಸಲು,ಜಲ ಧಾರಣವನ್ನು ನಿಯಂತ್ರಿಸಲು ಇತ್ಯಾದಿಗಳಿಗೆ ನೆರವಾಗುತ್ತದೆ. ಇವೆಲ್ಲ ಪ್ರಕ್ರಿಯೆಗಳು ತೂಕವನ್ನು ಕಡಿಮೆ ಮಾಡಲು ನೆರವಾಗುತ್ತವೆ.

► ನಿರೋಧಕತೆಯನ್ನು ಹೆಚ್ಚಿಸುತ್ತದೆ

ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕ ಗುಣಗಳುಳ್ಳ ಸೆಲೆನಿಯಂ ಮತ್ತು ಸತುವಿನಿಂತಹ ಕೆಲವು ಅಗತ್ಯ ನಿರೋಧಕ ಖನಿಜಗಳಿದ್ದು.ಇವು ಫ್ರೀರ್ಯಾಡಿಕಲ್‌ಗಳುಂಟು ಮಾಡುವ ಹಾನಿಯನ್ನು ತಡೆಯುತ್ತವೆ ಮತ್ತು ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ವಿರುದ್ಧ ಶರೀರಕ್ಕೆ ರಕ್ಷಣೆಯನ್ನು ನೀಡುತ್ತವೆ. ಅಲ್ಲದೆ ಬೆಲ್ಲವು ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನೂ ಹೆಚ್ಚಿಸುತ್ತದೆ.

► ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ನೀವು ಪ್ರತಿ ದಿನ ಬೆಲ್ಲವನ್ನು ಅಗತ್ಯವಾಗಿ ಸೇವಿಸಬೇಕು. ಅದು ಶರೀರದಲ್ಲಿ ಆಮ್ಲ ಮಟ್ಟಗಳನ್ನು ಕಾಯ್ದುಕೊಳ್ಳುವ ಮೂಲಕ ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸುತ್ತದೆ. ಬೆಲ್ಲದಲ್ಲಿರುವ ಪೊಟ್ಯಾಷಿಯಂ ಮತ್ತು ಅಲ್ಪ ಪ್ರಮಾಣದಲ್ಲಿರುವ ಸೋಡಿಯಂ ಈ ಪ್ರಕ್ರಿಯೆಗೆ ನೆರವಾಗುತ್ತವೆ.

► ಉಸಿರಾಟ ಸಮಸ್ಯೆಗಳನ್ನು ತಡೆಯುತ್ತದೆ

ಬೆಲ್ಲದ ಸೇವನೆಯು ಅಸ್ತಮಾ ಮತ್ತು ಬ್ರಾಂಕೈಟಿಸ್‌ನಂತಹ ಹಲವಾರು ಉಸಿರಾಟ ಕಾಯಿಲೆಗಳನ್ನು ಶಮನಿಸಲು ನೆರವಾಗುತ್ತದೆ. ಫಲಿತಾಂಶಗಳು ತಕ್ಷಣ ಕಂಡು ಬರುವುದಿಲ್ಲ ಮತ್ತು ಎರಡು ವಾರಗಳ ನಿರಂತರ ಸೇವನೆಯ ಬಳಿಕವೇ ನಿರೀಕ್ಷಿತ ಪರಿಣಾಮ ದೊರೆಯುತ್ತದೆ.

► ಯಕೃತ್ತನ್ನು ಸ್ವಚ್ಛಗೊಳಿಸುತ್ತದೆ

ದಿನನಿತ್ಯ ಬೆಲ್ಲ ಸೇವಿಸುವುದರಿಂದ ಯಕೃತ್ತಿನಲ್ಲಿಯ ಹಾನಿಕಾರಕ ನಂಜು ಶರೀರದಿಂದ ಹೊರಹಾಕಲ್ಪಡುತ್ತದೆ ಮತ್ತು ಯಕೃತ್ತನ್ನು ಆರೋಗ್ಯಯುತ ವಾಗಿರಿಸುತ್ತದೆ.

► ಮಲಬದ್ಧತೆಯನ್ನು ತಡೆಯುತ್ತದೆ

ಬೆಲ್ಲವು ಪಚನ ಕ್ರಿಯೆಯು ಆರಂಭಗೊಳ್ಳಲು ಜೀರ್ಣ ಕಿಣ್ವಗಳನ್ನು ಕ್ರಿಯಾಶೀಲಗೊಳಿಸುತ್ತದೆ ಮತ್ತು ಕರುಳಿನ ಚಲನವಲನಗಳನ್ನು ಕ್ರಮಬದ್ಧಗೊಳಿಸುತ್ತದೆ. ಇದು ನೋವಿನಿಂದ ಕೂಡಿದ ಮಲವಿಸರ್ಜನೆಯಿಂದ ಪಾರಾಗಲು ನೆರವಾಗುತ್ತದೆ. ಬೆಲ್ಲವು ಮೂತ್ರವರ್ಧಕ ಗುಣಗಳನ್ನೂ ಹೊಂದಿದೆ.

► ಫ್ಲು ಲಕ್ಞಣಗಳಿಗೆ ಚಿಕಿತ್ಸೆ ನೀಡುತ್ತದೆ

ಋತುಮಾನದಲ್ಲಿ ಬದಲಾವಣೆಯೊಂದಿಗೆ ದುರ್ಬಲ ರೋಗ ನಿರೋಧಕ ಶಕ್ತಿಯುಳ್ಳವರು ಕೆಮ್ಮು,ಶೀತ,ಗಂಟಲು ಕೆರೆತ ಮತ್ತು ಇತರ ಫ್ಲೂ ಲಕ್ಷಣಗಳಿಂದ ಬಳಲತೊಡಗುತ್ತಾರೆ. ಬೆಲ್ಲ ಇವುಗಳನ್ನು ಶಮನಿಸುತ್ತದೆ.

► ಮುಟ್ಟಿನ ನೋವನ್ನು ತಗ್ಗಿಸುತ್ತದೆ

ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಅನುಭವಿಸುವ ನೋವನ್ನು ಬೆಲ್ಲದ ಸೇವನೆಯು ಕಡಿಮೆ ಮಾಡುತ್ತದೆ. ಅದು ಜಠರವನ್ನು ಶಮನಿಸುವ ಮೂಲಕ ಎಂಡಾರ್ಫಿನ್‌ಗಳನ್ನು ಬಿಡುಗಡೆಗೊಳಿಸುತ್ತದೆ,ತನ್ಮೂಲಕ ಮುಟ್ಟಿನ ನೋವನ್ನು ಶಮನಿಸಲು ನೆರವಾಗುತ್ತದೆ.

► ರಕ್ತವನ್ನು ಶುದ್ಧಗೊಳಿಸುತ್ತದೆ

ಬೆಲ್ಲವು ರಕ್ತವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿದೆ. ಹೀಗಾಗಿ ಪ್ರತಿದಿನ ಬೆಲ್ಲವನ್ನು ಸೇವಿಸುವ ಮೂಲಕ ರಕ್ತದಲ್ಲಿಯ ಅಶುದ್ಧತೆಗಳನ್ನು ನಿವಾರಿಸಬಹುದು.

► ರಕ್ತಹೀನತೆಯನ್ನು ತಡೆಯುತ್ತದೆ

ಶರೀರದಲ್ಲಿ ಕೆಂಪು ರಕ್ತಕಣಗಳು ಕಡಿಮೆಯಾದಾಗ ರಕ್ತಹೀನತೆಯುಂಟಾಗುತ್ತದೆ. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ರಕ್ತಹೀನತೆಯನ್ನು ಎದುರಿಸಲು ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗುತ್ತದೆ. ಬೆಲ್ಲದಲ್ಲಿ ಫಾಲೇಟ್ ಮತ್ತು ಕಬ್ಬಿಣ ಸಮೃದ್ಧವಾಗಿದ್ದು,ಇವು ಕೆಂಪು ರಕ್ತಕಣಗಳ ಪುನರುತ್ಪಾದನೆಗೆ ನೆರವಾಗುತ್ತವೆ.

► ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಬೆಲ್ಲದಲ್ಲಿರುವ ಮ್ಯಾಗ್ನೀಷಿಯಂ ಕರುಳಿನ ಆರೋಗ್ಯಕ್ಕೆ ಪೂರಕವಾಗಿದೆ. ಅದು ಕರುಳು ಸೂಕ್ತವಾಗಿ ಕಾರ್ಯ ನಿರ್ವಹಿಸುವಂತೆ ಮತ್ತು ಆಹಾರವನ್ನು ಚೆನ್ನಾಗಿ ಜೀರ್ಣಿಸುವಂತೆ ಮಾಡುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X