Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಊರಿನ ಪತನವನ್ನು ಹೇಳುವ ‘ಹೆಸರೇ ಇಲ್ಲದ...

ಊರಿನ ಪತನವನ್ನು ಹೇಳುವ ‘ಹೆಸರೇ ಇಲ್ಲದ ಊರಲ್ಲಿ’

ಕಾರುಣ್ಯಕಾರುಣ್ಯ13 Dec 2020 12:10 AM IST
share
ಊರಿನ ಪತನವನ್ನು ಹೇಳುವ ‘ಹೆಸರೇ ಇಲ್ಲದ ಊರಲ್ಲಿ’

‘ಹೆಸರೇ ಇಲ್ಲದ ಊರಲ್ಲಿ’ ಕೃತಿ ಪತ್ರಕರ್ತ, ಕಥೆಗಾರ ಹಂಝ ಮಲಾರ್ ಅವರ 20 ಕತೆಗಳ ಗುಚ್ಛ. ಅರಸ್ತಾನದ ಕಥೆಗಳು, ಅದರಾಚೆ ಊರೇ ಇಲ್ಲ, ಉಮ್ಮನ ಅಲಿಖಾತು, ಅಜ್ಜಿ ಸಾಕಿದ ಪುಳ್ಳಿ ಮೊದಲಾದ ಕಥಾ ಸಂಕಲನಗಳನ್ನು ಹೊರತಂದಿರುವ ಹಂಝ ಮಲಾರ್ ಅವರ 15ನೇ ಕಥಾ ಸಂಕಲನ ಇದು.

ಸರಳತೆ , ಮೆದು ದನಿಯಲ್ಲಿ ಕತೆ ಹೇಳುವುದು ಹಂಝ ಅವರ ವೈಶಿಷ್ಟ. ಬ್ಯಾರಿ ಸಾಹಿತ್ಯ, ಸಂಸ್ಕೃತಿಯ ಕುರಿತ ಚಟುವಟಿಕೆಗಳಲ್ಲೂ ಆಳವಾಗಿ ತೊಡಗಿಕೊಂಡಿರುವ ಹಂಝ ಮಲಾರ್ ಅವರ ಕತೆಗಳಲ್ಲಿ ಸಹಜವಾಗಿಯೇ ಬ್ಯಾರಿ ಪರಿಸರ ಅನಾವರಣಗೊಂಡಿದೆ. ಬ್ಯಾರಿ ಪ್ರಭಾವಿತ ಸರಳಗನ್ನಡದಲ್ಲಿ ಕತೆಗಳನ್ನು ನಿರೂಪಿಸುವ ಎಂದಿನ ಶೈಲಿಯನ್ನು ಇಲ್ಲೂ ಕಾಣಬಹುದಾಗಿದೆ.

ಇಲ್ಲಿ ಒಟ್ಟು 22 ಕತೆಗಳಿವೆ. ಅವುಗಳಲ್ಲಿ ಮೊದಲ ಕತೆಯೇ ‘ಹೆಸರೇ ಇಲ್ಲದ ಊರಲ್ಲಿ’. ಒಂದು ಊರಿನ ಪತನವನ್ನು ಹೇಳುವ ಕತೆ ಇದು. ಪರಿಸರಕ್ಕೆ ಹೊಂದಿಕೊಂಡು ಬಾಳುತ್ತಿದ್ದ ಒಂದು ಊರು, ಆಧುನಿಕತೆ, ಮನುಷ್ಯನ ಲೋಭ, ದುಷ್ಟತನಕ್ಕೆ ಸಿಲುಕಿ ಹೇಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎನ್ನುವುದನ್ನು ವಿಭಿನ್ನವಾಗಿ ನಿರೂಪಿಸುತ್ತದೆ.

ವರ್ತಮಾನದಲ್ಲಿ ಹೇಗೆ ಹಂತ ಹಂತವಾಗಿ ಹಳ್ಳಿಗಳು ಆಧುನಿಕತೆಗೆ ಸಿಲುಕಿ ನಾಶವಾಗುತ್ತವೆ ಎನ್ನುವುದನ್ನು ಹೇಳುವ ಕತೆ ಇದು. ‘ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ’ ಕೂಡ ಮನುಷ್ಯನ ಪತನವನ್ನು ಸರಳವಾಗಿ ವಿವರಿಸಿ ಹೇಳುವ ಕತೆ. ಇದಕ್ಕಾಗಿ ಮಸ್ತಾನ್ ಉಪ್ಪಾಪ ಎಂಬ ನಿಗೂಢ ವೃದ್ಧರೊಬ್ಬರು ಕಾಣುವ ಕನಸುಗಳನ್ನು ಕತೆಗಾರ ಬಳಸಿಕೊಳ್ಳುತ್ತಾರೆ. ಪ್ರಪಂಚ ಹೇಗೆ ತನ್ನ ಪಾಪದಿಂದಾಗಿಯೇ ನಾಶವಾಗಲಿದೆ ಎನ್ನುವುದನ್ನು ಕುರ್‌ಆನ್‌ನಲ್ಲಿ ಬರುವ ರೂಪಕಗಳನ್ನು ಆಧರಿಸಿ ಈ ಕತೆ ವಿವರಿಸುತ್ತದೆ.

ಅಜ್ಜನ ಹಿಂದೆ ಹೆಜ್ಜೆ, ನಿತಾಕತ್, ಜಕ್ರಿ ಬ್ಯಾರಿಯ ದೇಹದಾನ ಪತ್ರ, ಪ್ರೊ. ಇದಿನಬ್ಬರ ಜೀವನೋತ್ಸಾಹ, ಖಾದ್ರಾಜಾರ್ ಹೀಗೆ ಬಹುತೇಕ ಕತೆಗಳು ಒಂದು ವೌನ ವಿಷಾದವನ್ನು ತನ್ನೊಳಗೆ ಬಚ್ಚಿದ್ದುಕೊಂಡಿರುವಂತಹದು. ಬದುಕಿನ ಹೋರಾಟಗಳಿಂದ, ಜಂಜಡಗಳಿಂದ ಸುಸ್ತಾದ ಜೀವಗಳು ಇಲ್ಲಿರುವ ಕತೆಗಳಲ್ಲಿ ಕಂಡು ಬರುತ್ತವೆ. ವರ್ತಮಾನದ ದುರಂತಗಳನ್ನು ಅಸಹಾಯಕವಾಗಿ ನೋಡುತ್ತಾ, ಅದರ ವಿರುದ್ಧ ನಿಲ್ಲಲಾಗದೆ ನಿಡುಸುಯ್ಯುವ ಪಾತ್ರಗಳೇ ಅಧಿಕ. ಇಲ್ಲಿರುವ ‘ಉನ್ಮಾದ’ ಕತೆ ಅತ್ಯಂತ ತೆಳುವಾದದ್ದು. ಪ್ರೇಮದ ಉನ್ಮಾದಕ್ಕೆ ಬಿದ್ದ ಹುಡುಗ ಅಂತಿಮವಾಗಿ ಸತ್ಯವನ್ನು ಅರಿತುಕೊಂಡು ವಾಸ್ತವಕ್ಕೆ ಬರುವುದನ್ನು ಹೇಳುತ್ತದೆ. ಇಂತಹ ವಾಚ್ಯವಾದ ಹಲವು ಕತೆಗಳೂ ಇಲ್ಲಿವೆ.

ಸುಮಾರು 15 ಕಥಾಸಂಕಲನ, ಅಂದರೆ ಅವರೇ ಹೇಳುವಂತೆ 220 ಕತೆಗಳನ್ನು ಬರೆದಿರುವ ಹಂಝ ಮಲಾರ್ ಅವರಿಂದ ಇನ್ನಷ್ಟು ಜೀವನಾನುಭವಗಳನ್ನು ಒಳಗೊಂಡ ಕತೆಗಳನ್ನು ಸಾಹಿತ್ಯ ಕ್ಷೇತ್ರ ನಿರೀಕ್ಷಿಸುತ್ತದೆ. ರೂಪ ಪ್ರಕಾಶನ ಮೈಸೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 216. ಮುಖಬೆಲೆ 200 ರೂಪಾಯಿ. ಆಸಕ್ತರು 94810 17495 ದೂರವಾಣಿಯನ್ನು ಸಂಪರ್ಕಿಸಬಹುದು. 

share
ಕಾರುಣ್ಯ
ಕಾರುಣ್ಯ
Next Story
X