ಕಾಸರಗೋಡು ಜಿಲ್ಲೆಯಲ್ಲಿ 12.30ರ ವೇಳೆ ಶೇ. 44.55 ಮತದಾನ
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ
![ಕಾಸರಗೋಡು ಜಿಲ್ಲೆಯಲ್ಲಿ 12.30ರ ವೇಳೆ ಶೇ. 44.55 ಮತದಾನ ಕಾಸರಗೋಡು ಜಿಲ್ಲೆಯಲ್ಲಿ 12.30ರ ವೇಳೆ ಶೇ. 44.55 ಮತದಾನ](https://www.varthabharati.in/sites/default/files/images/articles/2020/12/14/271137-1607931425.gif)
ಕಾಸರಗೋಡು, ಡಿ.14: ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ಮುಂದುವರಿದಿದೆ. ಮಧ್ಯಾಹ್ನ 12:30ರ ವೇಳೆಗೆ ಶೇ.44.55 ಮತದಾನವಾಗಿದೆ. ಈ ಅವಧಿಯಲ್ಲಿ ಒಟ್ಟು 4,66,470 ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ. ಈ ಪೈಕಿ 2,26,406 ಪುರುಷರು, 2,40,297 ಮಹಿಳಾ ಮತದಾರರು ಸೇರಿದ್ದಾರೆ.
ಜಿಲ್ಲಾ ಪಂಚಾಯತ್ ನ 17 ಡಿವಿಜನ್, 38 ಗ್ರಾಮ ಪಂಚಾಯತ್ ಗಳು, 6 ಬ್ಲಾಕ್ ಪಂಚಾಯತ್ ಮತ್ತು ಮೂರು ನಗರಸಭೆಗಳಿಗೆ ಚುನಾವಣೆ ನಡೆಯುತ್ತಿದೆ. 1,409 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 2,648 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Next Story