ಕಾಸರಗೋಡು ಜಿಲ್ಲೆಯಲ್ಲಿ ಮಧ್ಯಾಹ್ನ 1:15ರ ವೇಳೆ ಶೇ.50 ಮತದಾನ
![ಕಾಸರಗೋಡು ಜಿಲ್ಲೆಯಲ್ಲಿ ಮಧ್ಯಾಹ್ನ 1:15ರ ವೇಳೆ ಶೇ.50 ಮತದಾನ ಕಾಸರಗೋಡು ಜಿಲ್ಲೆಯಲ್ಲಿ ಮಧ್ಯಾಹ್ನ 1:15ರ ವೇಳೆ ಶೇ.50 ಮತದಾನ](https://www.varthabharati.in/sites/default/files/images/articles/2020/12/14/271140-1607932375.gif)
ಕಾಸರಗೋಡು, ಡಿ.14: ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ಮುಂದುವರಿದಿದೆ.
ಮಧ್ಯಾಹ್ನ 1:15ರ ವೇಳೆಗೆ ಶೇ.50 ಮತದಾನವಾಗಿದೆ. ಈ ಅವಧಿಯಲ್ಲಿ ಒಟ್ಟು 5,26,467ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ. ಈ ಪೈಕಿ 2,52,592 ಪುರುಷರು, 2,73,875 ಮಹಿಳಾ ಮತದಾರರು ಸೇರಿದ್ದಾರೆ.
ಜಿಲ್ಲಾ ಪಂಚಾಯತ್ ನ 17 ಡಿವಿಜನ್, 38 ಗ್ರಾಮ ಪಂಚಾಯತ್ ಗಳು, 6 ಬ್ಲಾಕ್ ಪಂಚಾಯತ್ ಮತ್ತು ಮೂರು ನಗರಸಭೆಗಳಿಗೆ ಚುನಾವಣೆ ನಡೆಯುತ್ತಿದೆ. 1,409 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 2,648 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Next Story