ಮಂಚಿ: ಸೂಪರ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ನಿಂದ ಕ್ರಿಕೆಟ್ ಪಂದ್ಯಾಟ

ಬಂಟ್ವಾಳ, ಡಿ.14: ಮಂಚಿಯ ಸೂಪರ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಂಚಿಯಲ್ಲಿ ರವಿವಾರ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ನಿವೃತ್ತ ಸೈನಿಕ ಉದಯಕುಮಾರ್ ರಾವ್ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಪುರಂದರ ಸಾಲ್ಯಾನ್ ಅತಿಥಿಯಾಗಿ ಭಾಗವಹಿಸಿದ್ದರು. ಇದೇವೇಳೆ ಸೂಪರ್ ಸ್ಟಾರ್ ತಂಡಕ್ಕೆ ಎಂ.ಎ. ಬ್ರದರ್ಸ್ ನೀಡಿದ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು.
ಪಂದ್ಯಾವಳಿಯಲ್ಲಿ ಸೂಪರ್ ಸ್ಟಾರ್ ತಂಡವು ಆಗಿ ಮೂಡಿ ಬಂದರೆ, ಮಂಚಿ ಕಟ್ಟೆಯ ಎಸ್.ಪಿ. ಬ್ರದರ್ಸ್ ರನ್ನರ್ ಅಪ್ ಆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಜಯಂತ್ ಕುಮಾರ್, ಶಾಫಿ, ಹನೀಫ್ ಎಂ.ಎ., ಅಝೀಝ್ ಎಂ.ಎ., ಯೂಸುಫ್, ಮುಹಮ್ಮದ್, ಇಬ್ರಾಹೀಂ ಎಂ.ಕೆ., ಮೊಯ್ದಿನ್ ಸಿ.ಎಚ್., ಸತ್ತಾರ್ ವೈಸಿಎಂ ಬಹುಮಾನಗಳನ್ನು ವಿತರಿಸಿದರು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ ನಗದು ಮತ್ತು ಬುರ್ಜ್ ಅಲ್ ಸಾಹಿಲ್ ಟ್ರೋಫಿ ಅದೇ ರೀತಿ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ನಗದು ಮತ್ತು ಬುರ್ಜ್ ಅಲ್ ಸಾಹಿಲ್ ಟ್ರೋಫಿ ಮತ್ತು ಶಿಸ್ತಿನ ತಂಡ ಹಾಗೂ ವೈಯುಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಚಿ ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜಿ.ಎಂ.ಇಬ್ರಾಹೀಂ ಮತ್ತು ಕೊಳ್ನಾಡು ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯ ಮುಹಮ್ಮದ್ ಶುಭ ಹಾರೈಸಿದರು. ನಝೀರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.








