ಮೀನುಗಾರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ

ಬೈಂದೂರು, ಡಿ.14: ಬೈಂದೂರು ವಲಯ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ ಉಪ್ಪುಂದ ಘಟಕ(ಸಿಐಟಿಯು) ನೇತೃತ್ವದಲ್ಲಿ ಮೀನುಗಾರರ ವಿವಿಧ ಬೆಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಂದು ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಕೋಣಿ, ಕರಾವಳಿ ಪ್ರದೇಶದಲ್ಲಿ ಮೀನುಗಾರರ ಪಂಜರ ಕೃಷಿ ಮೀನು ಲಕ್ಷಾಂತರ ಸಂಖ್ಯೆಯಲ್ಲಿ ಮೃತಪಟ್ಟ ಘಟನೆ ಬಗ್ಗೆ ವಿವಿಧ ಕ್ಷೇತ್ರಗಳ ವಿಷಯ ಪರಿಣತರಿಂದ ಕಾರಣ ಹುಡುಕಿ ಮೀನುಗಾರರಿಗೆ ನಷ್ಟ ಪರಿಹಾರವನ್ನು ಸರಕಾರ ಈ ಕೂಡಲೆ ಬಿಡುಗಡೆ ಮಾಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತ ಬೇಡಿಕೆಗಳ ಮನವಿಯನ್ನು ತಹಶೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಮೀನುಗಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಶಂಕರ, ಮುಖಂಡರಾದ ರಾಮ ಖಾರ್ವಿ, ವಿಠಲ ಖಾರ್ವಿ, ಗಣೇಶ ಮೊಗವೀರ ಬೈಂದೂರು, ಜ್ಯೋತಿ ಮೊಗವೀರ ಉಪ್ಪುಂದ, ಶ್ರೀಧರ ನಾಡ, ಮಂಜ ಪೂಜಾರಿ ದೊಂಬೆ ಪಡುವರಿ ಉಪಸ್ಥಿತರಿದ್ದರು.
Next Story





