ಅಬೂಸ್ವಾಲಿಹ್ ಉಸ್ತಾದರ ಶಿಷ್ಯ ಸಂಘಟನೆ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಅಸ್ತಿತ್ವಕ್ಕೆ

ಉಳ್ಳಾಲ: ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪಳ್ಳಿ ದರ್ಸಿನಲ್ಲಿ ಕಲಿತು ವಿವಿಧೆಡೆ ಸೇವೆಯಲ್ಲಿರುವ ಉಸ್ತಾದರ ಶಿಷ್ಯಂದಿರು ಅವರ ದೇರಳಕಟ್ಟೆ ಅಡ್ಕರೆಪಡ್ಪು ನಿವಾಸದಲ್ಲಿ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿದರು. ಜಲಾಲಿಯ್ಯ ರಾತೀಬ್ ಮಜ್ಲಿಸ್ ಗೆ ನೇತೃತ್ವ ನೀಡಿ ಅವರು ಪ್ರಾರ್ಥನೆ ನಡೆಸಿದರು.
ಬಳಿಕ ಹಳೆ ವಿದ್ಯಾರ್ಥಿಗಳಿಗಾಗಿ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಎಂಬ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಗೌರವಾಧ್ಯಕ್ಷರಾಗಿ ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ, ಅಧ್ಯಕ್ಷರಾಗಿ ಹಾಫಿಝ್ ಹನೀಫ್ ಸಅದಿ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಕೋಶಾಧಿಕಾರಿಯಾಗಿ ಅಬ್ದುರ್ರಶೀದ್ ಅತ್ತಾರೀ ಹುಬ್ಬಳ್ಳಿ, ಉಪಾಧ್ಯಕ್ಷರುಗಳಾಗಿ ಅಶ್ರಫ್ ಸಖಾಫಿ ಉಪ್ಪಿನಂಗಡಿ ಹಾಗು ಮಜೀದ್ ಬಾಹಸನಿ ಜಾರಿಗೆಬೈಲು, ಕಾರ್ಯದರ್ಶಿಗಳಾಗಿ ತೌಸೀಫ್ ಸಅದಿ ಹರೇಕಳ ಹಾಗು ಸಿದ್ದೀಕ್ ಮೋಂಟುಗೋಳಿ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಲತ್ವೀಫಿ ಬೆಳ್ಮ, ಸಂಚಾಲಕರಾಗಿ ಸಿಎಚ್ ಅಬ್ದುರ್ರಹ್ಮಾನ್ ಲತ್ವೀಫಿ ಚಂದಹಿತ್ತುಲು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಶೀದ್ ಜಲಾಲಿ ಕಕ್ಕಿಂಜೆ, ರಶೀದ್ ಸಖಾಫಿ ಪಚ್ಚಂಬಳ, ಶಫೀಕ್ ಮುಈನಿ ಜಾರಿಗೆಬೈಲು, ಮುಸ್ತಫ ಹನೀಫಿ ಜಾರಿಗೆಬೈಲು, ಅಯ್ಯೂಬ್ ಬಾಹಸನಿ ತೆಕ್ಕಾರ್, ನೌಫಲ್ ಕೊಳಕೆ, ಮುಹ್ಯಿದ್ದೀನ್ ಕುಪ್ಪೆಪದವು, ಶಂಸುದ್ದೀನ್ ಕುದ್ಕೋಳಿ ಅವರನ್ನು ಆಯ್ಕೆ ಮಾಡಲಾಯಿತು.





