ಉಡುಪಿ: ಗ್ರಾಪಂ 2ನೇ ಹಂತದ ಚುನಾವಣೆಗೆ ಮೂರನೇ ದಿನದಲ್ಲಿ 445 ನಾಮಪತ್ರಗಳ ಸಲ್ಲಿಕೆ
ಉಡುಪಿ, ಡಿ.14: ಜಿಲ್ಲೆಯಲ್ಲಿ ಕುಂದಾಪುರ, ಕಾರ್ಕಳ ಹಾಗೂ ಕಾಪು ತಾಲೂಕುಗಳ ಒಟ್ಟು 86 ಗ್ರಾಮ ಪಂಚಾಯತ್‌ಗಳ 1243 ಸ್ಥಾನಗಳಿಗೆ ಡಿ.27ರಂದು ನಡೆಯುವ ಎರಡನೇ ಹಂತದ ಚುನಾವಣೆಗಾಗಿ ಇಂದು ಒಟ್ಟು 445 (251 ಪುರುಷರು+194ಮಹಿಳೆಯರು)ನಾಮಪತ್ರಗಳ ಸಲ್ಲಿಕೆಯಾಗಿದೆ. ಈ ಮೂಲಕ ಮೂರು ದಿನಗಳಲ್ಲಿ ಒಟ್ಟು 1251 ನಾಮಪತ್ರಗಳು ಸಲ್ಲಿಕೆಯಾದಂತಾಗಿವೆ.
ಕುಂದಾಪುರ ತಾಲೂಕಿನ 43 ಗ್ರಾಪಂಗಳ 554 ಸ್ಥಾನಗಳಿಗೆ ಇಂದು 291 (150+131) ನಾಮಪತ್ರ ಸಲ್ಲಿಸಿದ್ದರೆ, ಕಾರ್ಕಳ ತಾಲೂಕಿನ 27 ಗ್ರಾಪಂಗಳ 399 ಸ್ಥಾನಗಳಿಗೆ 41 (27+14) ಹಾಗೂ ಕಾಪು ತಾಲೂಕಿನ 16 ಗ್ರಾಪಂಗಳ 290 ಸ್ಥಾನಗಳಿಗೆ 11 (64+49) ನಾಮಪತ್ರಗಳು ಸಲ್ಲಿಕೆಯಾಗಿವೆ.
ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು 28, ಪರಿಶಿಷ್ಟ ಪಂಗಡದ 46, ಹಿಂದುಳಿದ ವರ್ಗ ಎಯಿಂದ 100, ಹಿಂದುಳಿದ ವರ್ಗ ಬಿಯಿಂದ 26, ಸಾಮಾನ್ಯ ಅಭ್ಯರ್ಥಿಗಳು 261 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.
ನಾಮಪತ್ರ ಸಲ್ಲಿಕೆಗೆ ಡಿ.16 ಕೊನೆಯ ದಿನವಾಗಿದೆ. 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ.19 ನಾಮಪತ್ರ ಹಿಂದೆಗೆತಕ್ಕೆ ಕೊನೆಯ ದಿನವಾಗಿದೆ.





