ಇಂಡಿಯಲ್ ಆಯಿಲ್ ಆರ್.ಓ.ಗಳಲ್ಲಿ ಇವಿಸಿಎಸ್ ಸೌಲಭ್ಯ ಉದ್ಘಾಟನೆ

ಬೆಂಗಳೂರು, ಡಿ.14: ಕೇಂದ್ರ ಸರಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ತರುಣ್ ಕಪೂರ್ ಸೋಮವಾರ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿನ ಇಂಡಿಯನ್ ಆಯಿಲ್ ಚಿಲ್ಲರೆ ಮಾರಾಟ ಮಳಿಗೆಯ ಇಂಧನ ವಲಯದಲ್ಲಿ ಇಂಡಿಗ್ರೀನ್ ಸೌಲಭ್ಯ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರ (ಇವಿಸಿಎಸ್)ಕ್ಕೆ ಇಂಡಿಯನ್ ಆಯಿಲ್ ರಾಜ್ಯ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ರಾಜ್ಯಮಟ್ಟದ ಸಂಯೋಜಕ ಡಿ.ಎಲ್.ಪ್ರಮೋದ್ ಸಮ್ಮುಖದಲ್ಲಿ ಚಾಲನೆ ನೀಡಿದರು.
ಇಂಡಿಯನ್ ಆಯಿಲ್ ಮತ್ತು ಇಂಧನ ಗ್ರಿಡ್‍ನ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಈವರೆಗೆ 19 ಇವಿಸಿಎಸ್ ಮತ್ತು ಬ್ಯಾಟರಿ ಬದಲಾವಣೆ ಸೌಲಭ್ಯವನ್ನು ಬೆಂಗಳೂರಿನ ಇಂಡಿಯನ್ ಆಯಿಲ್‍ನ ವಿವಿಧ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಒದಗಿಸಲಾಗಿದೆ. ಇಂಡಿಯನ್ ಆಯಿಲ್ ತನ್ನ ಹಸಿರು ಉಪಕ್ರಮದ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಈ ಹಣಕಾಸು ವರ್ಷದಲ್ಲಿ ರಾಜ್ಯದಾದ್ಯಂತ ಇರುವ 32 ಆಯ್ದ ಚಿಲ್ಲರೆ ಮಾರಾಟ ಮಳಿಗೆ (ಬಂಕ್‍ಗಳು)ಗಳಲ್ಲಿ ಒದಗಿಸಲು ಮತ್ತು ತನ್ನ ಗ್ರಾಹಕರಿಗೆ ಪರ್ಯಾಯ ಇಂಧನ ಒದಗಿಸಲು ಯೋಜಿಸಿದೆ ಎಂದು ಸಾಂಸ್ಥಿಕ ಸಂವಹನ ಮತ್ತು ಎಚ್.ಆರ್-ಸಿಎಸ್‍ಆರ್ ಉಪ ಪ್ರಧಾನ ವ್ಯವಸ್ಥಾಪಕ ನೂರಾನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






