ಪ್ರತಿಭಟನಾನಿರತ 70ರ ವಯಸ್ಸಿನ ಪಂಜಾಬ್ ರೈತ ನಿಧನ

ಹೊಸದಿಲ್ಲಿ: ದಿಲ್ಲಿ ಹಾಗೂ ಹರ್ಯಾಣವನ್ನು ಸಂಪರ್ಕಿಸುವ ಸಿಂಘು ಗಡಿಯಲ್ಲಿ ಪಂಜಾಬ್‌ನ 70ರ ವಯಸ್ಸಿನ ರೈತರೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಇತರ ರೈತರೊಂದಿಗೆ ಪ್ರತಿಭಟಿಸುತ್ತಿದ್ದ ವೃದ್ದ ರೈತರೊಬ್ಬರು ಉಷಾ ಟವರ್ಸ್ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತಪಟ್ಟಿರುವ ರೈತ ಪಂಜಾಬ್‌ನ ಮೊಹಾಲಿಯವರು. ರೈತನ ಸಾವಿನ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಮೃತ ರೈತನ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ.
ಸಾವಿಗೆ ಕಾರಣವೇನೆಂಬ ಖಚಿತಪಡಿಸಲು ತನಿಖೆ ಆರಂಭವಾಗಿದೆ. ರೈತನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ವಾರದ ಹಿಂದೆ ಹರ್ಯಾಣದ 32ರ ವಯಸ್ಸಿನ ರೈತ ಟಿಕ್ರಿ ಗಡಿಯಲ್ಲಿ ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡುಬಂದಿದ್ದರು. ಅಜಯ್ ಮೂರ್ ಟಿಕ್ರಿ ಗಡಿಯಲ್ಲಿ ಕಳೆದ ಕೆಲವು ದಿನಗಳಿಂದ ಕೃಷಿ ಕಾಯ್ದೆಗಳ ವಿರುದ್ಧ ನೂರಾರು ರೈತರ ಜೊತೆ ಪ್ರತಿಭಟನೆ ನಡೆಸಿದ್ದರು. ಹರ್ಯಾಣದ ಸೋನಿಪತ್‌ನ ಅಜಯ್ ಮೂರ್ ಟಿಕ್ರಿ ಗಡಿ ಸಮೀಪದ ಟಿಡಿಐ ಪಾರ್ಕ್‌ನಲ್ಲಿ ನಿದ್ದೆಯಲ್ಲಿದ್ದಾಗ ಮೃತಪಟ್ಟಿದ್ದಾರೆ. ರೈತರ ಪ್ರತಿಭಟನೆ ಆರಂಭವಾದ ಬಳಿಕ ಸೋನಿಪತ್-ಸಿಂಘು ಗಡಿಯಲ್ಲಿ ಪ್ರತಿಭಟನಾಸ್ಥಳದಲ್ಲಿ ನಾಲ್ವರು ರೈತರು ಮೃತಪಟ್ಟಿದ್ದಾರೆ.





