ಚೇರ್ಕಾಡಿ ಶಾಲಾ ಪರಿಸರದಲ್ಲಿ ಪತಂಗದ ಹುಳಗಳ ಹಿಂಡು !
ಲಕ್ಷಾಂತರ ಸಂಖ್ಯೆಯಲ್ಲಿ ಹುಳಗಳು, ಸ್ಥಳೀಯ ಗ್ರಾಪಂನಿಂದ ಔಷಧಿ ಸಿಂಪಡಿಕೆ

ಬ್ರಹ್ಮಾವರ, ಡಿ.15: ಚೇರ್ಕಾಡಿ ಆರ್.ಕೆ.ಪಾಟ್ಕರ್ ಶಾರದಾ ಹಿರಿಯ ಪ್ರಾಥ ಮಿಕ ಶಾಲಾ ಪರಿಸರದಲ್ಲಿ ಕಳೆದ ಎರಡು ಮೂರು ದಿನಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪತಂಗದ ಹುಳಗಳ ಹಿಂಡು ಕಂಡುಬಂದಿದೆ. ಇದು ಬಹಳಷ್ಟು ಕುತೂಹಲ ಹಾಗೂ ಸ್ಥಳೀಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಶಾಲೆಯ ಎದುರು ಹಾಗೂ ಹಿಂಬದಿಯ ಮೇ ಫ್ಲವರ್ ಮರಗಳಲ್ಲಿ, ಶಾಲೆಯ ಗೋಡೆ, ಕಂಪೌಂಡ್‌ಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹುಳಗಳು ಹರಿ ದಾಡುತ್ತಿರುವುದು ಕಂಡುಬಂದಿವೆ. ಈ ಹುಳಕ್ಕೆ ಸಂಬಂಧಿಸಿದ ಪತಂಗವು ಮೇ ಫ್ಲವರ್ ಮರದಲ್ಲಿ ಮೊಟ್ಟೆ ಇಟ್ಟಿದ್ದು, ಈ ಮರದ ಎಲೆಗಳನ್ನು ತಿಂದಿರುವ ಹುಳ ಗಳು, ಕೋಶಗಳ ರಚನೆಗಾಗಿ ಮರದಿಂದ ಇಳಿದು ಬಂದಿದೆ.
ಹೀಗೆ ಈ ಹುಳಗಳು ಶಾಲೆಯ ಕಂಪೌಂಡ್, ಗೋಡೆ ಹಾಗೂ ನೆಲದಲ್ಲಿ ಹರಿದಾಡುತ್ತಿರುವುದು ಕಾಣಸಿಕ್ಕಿವೆ. ಕೆಲವು ಹುಳಗಳು ಕೋಶಾವಸ್ಥೆಗೆ ತೆರಳಿ ರುವುದು ಕೂಡ ಕಂಡುಬಂದಿದೆ. ಆರಂಭದಲ್ಲಿ ಬೆರಳಣಿಕೆ ಸಂಖ್ಯೆಯಲ್ಲಿ ಮರಗಳಲ್ಲಿ ನೇತಾಡುತ್ತಿದ್ದ ಈ ಹುಳಗಳು, ಕಳೆದ ವಾರ ಮಳೆ ಬಂದ ನಂತರ ಹೆಚ್ಚಾಗಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.
ಡಿ.12ರಂದು ಸಾವಿರಾರು ಸಂಖ್ಯೆಯಲ್ಲಿ ಕಂಡು ಬಂದ ಈ ಹುಳಗಳ ಸಂಖ್ಯೆ ಡಿ.13ರಂದು ಇನ್ನಷ್ಟು ಹೆಚ್ಚಿ ಲಕ್ಷಕ್ಕೂ ಮೀರಿತ್ತು. ಈ ಬಗ್ಗೆ ಆತಂಕ ಗೊಂಡ ಶಾಲಾ ಶಿಕ್ಷಕರು ಹಾಗೂ ಸ್ಥಳೀಯರು ಈ ಬಗ್ಗೆ ಸ್ಥಳೀಯ ಗ್ರಾಪಂಗೆ ಮಾಹಿತಿ ನೀಡಿದರು. ಅದರಂತೆ ಗ್ರಾಪಂನವರು ಡಿ.14ರಂದು ಸ್ಥಳಕ್ಕೆ ಆಗಮಿಸಿ ಪರಿಶೀನೆ ನಡೆಸಿದರು.
ಬಳಿಕ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸೂಚಿಸಿದ ರಾಸಾ ಯನಿಕವನ್ನು ಹುಳಗಳಿರುವ ಶಾಲಾ ಕಟ್ಟಡ, ಕಂಪೌಂಡ್, ಮರಗಳಿಗೆ ಸಿಂಪಡಿಸಿ ದ್ದಾರೆ. ಇದರಿಂದ ಬಹುತೇಕ ಹುಳಗಳು ಸತ್ತು ಬಿದ್ದಿವೆ. ಆದರೆ ಇನ್ನು ಕೂಡ ಕೆಲವು ಸಂಖ್ಯೆಯ ಹುಳಗಳು ಅಲ್ಲಲ್ಲಿ ಕಂಡುಬಂದಿವೆ ಎಂದು ನಿವೃತ್ತ ಶಿಕ್ಷಕ ಜಿ.ಎಸ್.ಪ್ರಭು ಮಾಹಿತಿ ನೀಡಿದ್ದಾರೆ.
‘ರಾಸಾಯನಿಕ ಸಂಪಡಿಸಿದ ನಂತರ ಹುಳಗಳು ನಿಯಂತ್ರಣಕ್ಕೆ ಬಂದಿದೆ. ಶಾಲೆಯ ಎದುರಿನ ಮೂರು ಮರ, ಹಿಂದಿನ ಮೂರು ಮರಗಳಲ್ಲಿ ಈ ಹುಳ ಗಳು ಕಂಡುಬಂದಿವೆ. ಈ ಹುಳ ಮೈಗೆ ತಾಗಿದರೆ ತುಂಬಾ ತುರಿಕೆ ಉಂಟಾ ಗುತ್ತದೆ. ಆದುದರಿಂದ ನಮಗೆ ಶಾಲೆಗೆ ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ. ಒಳಗೆ ಹೋದ ನಂತರ ನಾವು ಬಾಗಿಲು ಹಾಕಿಯೇ ಇದ್ದೇವು. ಹೊರಗಡೆ ಬಾರದ ಸ್ಥಿತಿ ಇತ್ತು. ಮೇ ಫ್ಲವರ್ ಮರದ ಎಲೆ ಗಳನ್ನು ಮಾತ್ರ ಅವು ತಿನ್ನುವುದು ಕಂಡುಬಂದಿದೆ’ ಎಂದು ಶಾಲಾ ಶಿಕ್ಷಕ ನವೀನ್ ಕೆ.ಎಸ್. ತಿಳಿಸಿದ್ದಾರೆ.
''ಅಪಾರ ಸಂಖ್ಯೆಯಲ್ಲಿ ಹುಳಗಳು ಇರುವ ಬಗ್ಗೆ ಮಾಹಿತಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಂದ ತಿಳಿದುಬಂದಿದೆ. ಈ ಸಂಬಂಧ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದೇನೆ. ಔಷಧಿ ಸಿಂಪಡಿಸಿರುವುದರಿಂದ ಎಲ್ಲ ಹುಳಗಳು ಸತ್ತು ಹೋಗಿವೆ. ಇದು ಪತಂಗದ ಹುಳ ಆಗಿದ್ದು, ಕೋಶಾ ವಸ್ಥೆಗಾಗಿ ಮರದಿಂದ ಇಳಿದುಬಂದಿದೆ. ಹುಳದ ಮಾದರಿಯನ್ನು ಸಂಗ್ರಹಿಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲಾಗುತ್ತಿದೆ''
-ಡಾ.ಸಚಿನ್, ಕೀಟ ತಜ್ಞ, ಬ್ರಹ್ಮಾವರ ಕೃಷಿ ಕೇಂದ್ರ
''ಈ ಹುಳಗಳ ಹಾವಳಿಯಿಂದ ಸಮೀಪದ ಅಂಗಡಿಯವರು ಕೂಡ ತೊಂದರೆ ಅನುಭವಿಸಿದ್ದಾರೆ. ಮತದಾನ ಕೇಂದ್ರವಾಗಿರುವ ಈ ಶಾಲೆಯಲ್ಲಿ ಹುಳಗಳು ಕಂಡುಬಂದಿರುವುದರಿಂದ ಕೂಡಲೇ ಗ್ರಾಪಂಗೆ ಮಾಹಿತಿ ನೀಡಿ, ಔಷಧಿ ಸಿಂಪಡಿಸಲಾಗಿದೆ. ಶಾಲಾ ಕಟ್ಟಡ ತುಂಬಾ ಈ ಹುಳ ಹರಿ ದಾಡುತ್ತಿದ್ದು, ಕೆಲವು ಹುಳಗಳು ಗೂಡು ಕಟ್ಟುತ್ತಿರುವುದು ಕೂಡ ಕಂಡುಬರುತ್ತಿವೆ''.
-ಜಿ.ಎಸ್.ಪ್ರಭು, ನಿವೃತ್ತ ಶಿಕ್ಷಕ, ಚೇರ್ಕಾಡಿ






.jpeg)
.jpeg)

.jpeg)


