ಎಸ್ಸೆಸ್ಸೆಫ್ ಕೋಯನಗರ ಯೂನಿಟ್ ವಾರ್ಷಿಕ ಮಹಾಸಭೆ
ನಾವುಂದ, ಡಿ.15: ಎಸ್ಸೆಸ್ಸೆಫ್ ಕೋಯನಗರ ಯೂನಿಟ್ ಮಹಾಸಭೆಯು ಶಾಖಾಧ್ಯಕ್ಷ ಕೆ.ಎ.ಮುಹಮ್ಮದ್ ಮುಸ್ತಫ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕೋಯ ನಗರ ನೂರುಲ್ ಹುದಾ ಮಸೀದಿಯಲ್ಲಿ ನಡೆಯಿತು.
ಸಭೆಯನ್ನು ಸ್ಥಳೀಯ ಇಮಾಮ್ ಕೊಂಬಾಳಿ ಕೆ.ಎಂ.ಎಚ್.ಝುಹುರಿ ಉದ್ಘಾಟಿಸಿದರು. ನಾವುಂದ ಕೇಂದ್ರ ಜುಮಾ ಮಸೀದಿಯ ಮುದರಿಸ್ ಅಬ್ದುಲ್ಲತೀಫ್ ಅಲ್-ಫಾಳಿಲಿ ಸಂಘಟನಾ ತರಬೇತಿ ನಡೆಸಿಕೊಟ್ಟರು. ಮುನೀರ್ ಸಖಾಫಿ ಸುಳ್ಯ ಪ್ರಾರ್ಥನೆಗೆ ನೇತೃತ್ವ ನೀಡಿದರು. 2021-22ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಕೊಂಬಾಳಿ ಕೆ.ಎಂ.ಎಚ್.ಝುಹುರಿ, ಮುನೀರ್ ಸಖಾಫಿ ಸುಳ್ಯ, ಅಡ್ವಕೇಟ್ ಇಲ್ಯಾಸ್ ಕೆ.ಎಂ., ಅಧ್ಯಕ್ಷರಾಗಿ ನೌಶಾದ್ ರೋಯಲ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಗಂಗಾವಳಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಯಾಸಿರ್, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಮುಝೈರ್, ಮುಹಮ್ಮದ್ ನವೀಝ್, ಕಾರ್ಯದರ್ಶಿಗಳಾಗಿ ಇರ್ಫಾನ್ ಗಂಗಾವಳಿ, ಮುಹಮ್ಮದ್ ರಾಶಿಖ್, ಮುಹಮ್ಮದ್ ಅಲ್ಫಾಝ್, ಅಬ್ದುರ್ರಹ್ಮಾನ್, ಮುಹಮ್ಮದ್ ಅಶ್ರಫ್ ಕೆ.ಟಿ., ಮುಹಮ್ಮದ್ ರಿಶಾದ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಮುಸ್ತಫ, ಮುಹಮ್ಮದ್ ಮುಜ್ತಬ, ಮುಹಮ್ಮದ್ ಮುಝಮ್ಮಿಲ್, ಎನ್.ಸಿ.ನೌಶಾದ್, ಇದ್ರೀಸ್ ಶಾಫಿ, ಮುಹಮ್ಮದ್ ಜಾಬಿರ್, ಮುಹಮ್ಮದ್ ಸಿನಾನ್, ಮುಬಶ್ಶಿರ್ ಅವರನ್ನು ಆಯ್ಕೆ ಮಾಡಲಾಯಿತು.